ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೆ ಅದಿಕಾರದ ಕಿತ್ತಾಟ ಶುರುವಾಗಿದ್ದು,ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಿಜೆಪಿ-ಶಿಂಧೆ ಬಣದ ಜೊತೆ ಸೇರಿಕೊಂಡಿದ್ದಾರೆ.
ಎನ್‌ಸಿಪಿ ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದರ ಬೆನ್ನಲ್ಲೇ ಮಾತನಾಡಿದ ಸಿಎಂ ಏಕನಾಥ್ ಶಿಂಧೆ , ಮಹಾರಾಷ್ಟ್ರದ ಅಭಿವೃದ್ಧಿಗೆ ಇದ್ದ ಡಬಲ್ ಎಂಜಿನ್ (Double-Engine) ಸರ್ಕಾರ ಈಗ ತ್ರಿಬಲ್ ಎಂಜಿನ್ (Triple Engine) ಆಗಿದೆ ಎಂದು ಹೇಳಿದರು.
ಓರ್ವ ಸಿಎಂ, ಇಬ್ಬರು ಡಿಸಿಎಂ ನಮ್ಮ ಸರ್ಕಾರದಲ್ಲಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಡಬಲ್ ಎಂಜಿನ್ ಈಗ ತ್ರಿಬಲ್ ಎಂಜಿನ್ ಆಗಿದೆ. ಅಜಿತ್ ಪವಾರ್ ಅವರನ್ನು ನಾನು ಸ್ವಾಗತಿಸುತ್ತೇನೆ. ಅವರ ಅನುಭವ ಸರ್ಕಾರಕ್ಕೆ ಶಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಇನ್ನು ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಕುರಿತು ಚರ್ಚೆ ನಡೆಸಲು ಸಾಕಷ್ಟು ಸಮಯಾವಕಾಶವಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವೆಲ್ಲ ಒಗ್ಗೂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ 4-5 ಸ್ಥಾನಗಳನ್ನು ಪಡೆದಿರುವ ಅವರು (ವಿಪಕ್ಷಗಳು) ಈ ಬಾರಿ ಅಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲ್ಲ ಎಂದು ತಿರುಗೇಟು ನೀಡಿದರು.
ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದಲ್ಲಿ 29 ಶಾಸಕರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಜೊತೆ ಕೈ ಜೋಡಿಸಿದ್ದಾರೆ.