ಜನ ಈ ಆಟವನ್ನು ಹೆಚ್ಚು ದಿನ ಸಹಿಸುವುದಿಲ್ಲ: ಅಜಿತ್ ಪವಾರ್ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರ ರಾಜಕೀಯದಲ್ಲಿ ಎನ್​ಸಿಪಿಯಿಂದ ಬಂಡಾಯವೆದ್ದು ಅಜಿತ್ ಪವಾರ್(Ajit Pawar) ಏಕನಾಥ್ ಶಿಂದೆ ಸರ್ಕಾರವನ್ನು ಸೇರಿದ್ದು, ಉಪ ಮುಖ್ಯಮಂತ್ರಿವಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.

ಜನರು ಈ ಆಟವನ್ನು ಹೆಚ್ಚು ದಿನ ಸಹಿಸುವುದಿಲ್ಲ, ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಬಲಿಷ್ಠರಿದ್ದಾರೆ ಜತೆ ಜನರ ಬೆಂಬಲವೂ ಅವರ ಮೇಲಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತೆ ಎಲ್ಲವನ್ನೂ ಪುನರ್ ನಿರ್ಮಿಸುತ್ತಾರೆ ಎಂದಿದ್ದಾರೆ.

ಪವಾರ್ ಬಂಡಾಯದ ನಂತರ ಎನ್‌ಸಿಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಲ್ಲಿ ಭ್ರಷ್ಟರೂ ಇದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!