ಹೊಸದಿಗಂತ ಡಿಜಿಟಲ್ ಡೆಸ್ಕ್:
12 ದಿನಗಳ ಬ್ರೇಕ್ ನಂತರ ರಷ್ಯಾ ಮತ್ತೆ ಉಕ್ರೇನ್ ಮೇಲೆ ಡ್ರೋನ್ ದಾಳಿ ಮಾಡಿದೆ.
ರಾತ್ರೋರಾತ್ರೋ ರಷ್ಯಾ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸಿದೆ. 12 ದಿನಗಳ ನಂತರ ಇದೇ ಮೊದಲ ಬಾರಿಗೆ ರಷ್ಯಾ ದಾಳಿ ನಡೆಸಿದೆ. ಉಕ್ರೇನ್ ಸೇನೆ ಕೂಡ ತಕ್ಕ ಉತ್ತರ ನೀಡಿದ್ದು, ರಷ್ಯಾ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಒಟ್ಟಾರೆ ರಷ್ಯಾದ ಎಂಟು ಡ್ರೋನ್ಗಳು ಹಾಗೂ ಮೂರು ಕಲಿಬ್ ಕ್ರೂಸ್ ಕ್ಷಿಪಣಿಗಳನ್ನು ರಷ್ಯಾ ಉಕ್ರೇನ್ ಮೇಲೆ ದಾಳಿಗೆ ಕಳುಹಿಸಿದ್ದು, ಉಕ್ರೇನ್ ಪಡೆ ಎಲ್ಲವನ್ನೂ ಹೊಡೆದುರುಳಿಸಿದೆ.
ಇಷ್ಟೇ ಅಲ್ಲದೆ ಕೆರ್ಸಾನ್ ಪ್ರಾಂತ್ಯದಲ್ಲಿ ಬೆಳಗ್ಗೆ ಶೆಲ್ ದಾಳಿ ನಡೆಸಿದ್ದು, ಸಾರ್ವಜನಿಕರು ಗಾಯಗೊಂಡಿದ್ದಾರೆ. ಉಕ್ರೇನ್ನ ಕೈಗಾರಿಕಾ ನಗರಗಳನ್ನು ರಷ್ಯಾ ಟಾರ್ಗೆಟ್ ಮಾಡಿದೆ. ದೇಶದ ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾಗಗಳ ಮೇಲೆ ರಷ್ಯಾ ದಾಳಿ ನಡೆಸುತ್ತಲೇ ಇದೆ.
ಡ್ರೋನ್ ಅವಶೇಷಗಳು ಬಿದ್ದ ಕೆಲವರಿಗೆ ಗಾಯಗಳಾಗಿವೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.