ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿಯಲ್ಲಿ ಟೀಚರ್ ಒಬ್ಬರಿಗೆ ಅತ್ಯಂತ ಕೆಟ್ಟ ಉದ್ಯೋಗಿ ಎನ್ನುವ ಹೆಸರು ಸಿಕ್ಕಿದೆ, ಇದಕ್ಕೆ ಕಾರಣ ಏನಂದ್ರೆ ಈ ಶಿಕ್ಷಕಿ ತನ್ನ 24 ವರ್ಷದ ಸರ್ವೀಸ್ನಲ್ಲಿ 20 ವರ್ಷ ರಜೆ ಹಾಕಿದ್ದಾರೆ.
ಅನಾರೋಗ್ಯ ಕಾರಣ ಹಾಗೂ ಪರ್ಯಾರ ರಜೆ ಮತ್ತೆ ಕಾನ್ಫರೆನ್ಸ್ನಲ್ಲಿ ಭಾಗಿಯಾಗ್ತೀನಿ ಎಂದು ಟೀಚರಮ್ಮ ಸಾಕಷ್ಟು ರಜೆ ಪಡೆದಿದ್ದಾರೆ.
ಸಿಂಜಿಯೋ ಪಾವೋಲಿನಾ ಡಿ ಲಿಯೋ ಎಂಬ ಮಹಿಳೆ ವೆನಿಸ್ ಬಳಿಯ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳಿಗೆ ಸಾಹಿತ್ಯ ಹಾಗೂ ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದಾರೆ. ಕಳೆದ 24ವರ್ಷಗಳಲ್ಲಿ ಇವರು ಕೇವಲ ನಾಲ್ಕು ವರ್ಷ ಮಾತ್ರ ಕೆಲಸ ಮಾಡಿದ್ದಾರೆ.
ಈ ರೀತಿ ಅತಿಯಾಗಿ ರಜೆ ತೆಗೆದುಕೊಳ್ಳುತ್ತಿದ್ದ ಕಾರಣ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ.