CINE| ಬನ್ನಿ ಜೊತೆ ತ್ರಿವಿಕ್ರಮ್ ಸಿನಿಮಾ ಅನೌನ್ಸ್: ಮಹೇಶ್ ಅಭಿಮಾನಿಗಳಿಗೆ ನಿರಾಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತ್ರಿವಿಕ್ರಮ್ ಸದ್ಯ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದರಿಂದ ಈ ಸಿನಿಮಾದ ಬಗ್ಗೆ ಮಹೇಶ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಚಿತ್ರದ ಶೂಟಿಂಗ್ ತಡವಾಗದ ಕಾರಣಕ್ಕೆ ಪೂಜಾ ಹೆಗಡೆ ಕೂಡ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ನಿರ್ಮಾಪಕರು ಘೋಷಿಸಿದ್ದರೂ, ಯಾವುದೇ ಸುದ್ದಿಗಳಿಲ್ಲ. ಮತ್ತು ಸಂಕ್ರಾಂತಿಗೆ ಅನೌನ್ಸ್ ಆಗಿರುವ ಈ ಚಿತ್ರ ಬೇಸಿಗೆಗೆ ಬರಲಿದೆ ಎಂಬ ಸುದ್ದಿ ಬರುತ್ತಿದೆ.

ತ್ರಿವಿಕ್ರಮ್- ಮಹೇಶ್ ಚಿತ್ರದ ಶೂಟಿಂಗ್ ಅರ್ಧದಷ್ಟು ಮುಗಿಯುವ ಮೊದಲೇ ಅಲ್ಲು ಅರ್ಜುನ್ ಜೊತೆಗಿನ ಚಿತ್ರವನ್ನು ಘೋಷಿಸಿದ್ದರಿಂದ ಮಹೇಶ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ತ್ರಿವಿಕ್ರಮ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ ಜುಲಾಯ್, ಸನ್ ಆಫ್ ಸತ್ಯಮೂರ್ತಿ ಮತ್ತು ಅಲವೈಕುಂಠಪುರಂ ಚಿತ್ರಗಳು ಈಗಾಗಲೇ ದೊಡ್ಡ ಯಶಸ್ಸನ್ನು ಸಾಧಿಸಿವೆ. ಇತ್ತೀಚೆಗಷ್ಟೇ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಅಧಿಕೃತವಾಗಿ ಘೋಷಣೆಯಾಗಿದೆ.

ಈ ಬಗ್ಗೆ ಬನ್ನಿ ಅಭಿಮಾನಿಗಳು ಖುಷಿಯಾಗಿದ್ದರೆ, ಮಹೇಶ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ತ್ರಿವಿಕ್ರಮ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಮೊದಲು ಮಹೇಶ್‌ ಬಾಬು ಚಿತ್ರದ ಶೂಟಿಂಗ್ ಪೂರ್ಣಗೊಳಿಸುವಂತೆ ಕಾಮೆಂಟ್‌ ಮಾಡ್ತಿದಾರೆ.ಸಿನಿಮಾ ಮಾಡುವ ಉದ್ದೇಶ ಇಲ್ಲ ಅಂದ್ರೆ ಇಲ್ಲಿಗೆ ನಿಲ್ಲಿಸಿ ಎಂದು ಕಮೆಂಟ್‌ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!