ಯಾರಿಗೇ ಆಗಲಿ ಮದುವೆ ಎನ್ನೋದು ಲೈಫ್ ಚೇಂಜರ್. ಒಳ್ಳೆ ಹುಡುಗಿಗೆ ಕೆಟ್ಟ ಹುಡುಗ, ಅಥವಾ ಒಳ್ಳೆ ಹುಡುಗನಿಗೆ ಕೆಟ್ಟ ಹುಡುಗಿ ಸಿಕ್ಕರೆ ಜೀವನವೇ ಸಮಸ್ಯೆಯಾಗುತ್ತದೆ. ಇಲ್ಲಿ ಭಾವನಗೆಳ ಜೊತೆ ಸಿಕ್ಕು ಒದ್ದಾಡಬೇಕಾಗುತ್ತದೆ. ಮದುವೆಗೂ ಮುನ್ನ ಆಕೆಯಲ್ಲಿ ಈ ಗುಣಗಳಿದ್ಯಾ ಚೆಕ್ ಮಾಡಿ..
- ಆಕೆಗೆ ನೀವು ಪ್ರಿಯಾರಿಟಿ ಹೌದಾ? ಎಲ್ಲ ಪರಿಸ್ಥಿತಿಯಲ್ಲಿಯೂ ನಿಮ್ಮ ಬಗ್ಗೆ ಆಲೋಚನೆ ಮಾಡ್ತಾಳಾ ನೋಡಿ..
- ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡುತ್ತಾಳಾ? ಈಗೆಲ್ಲಾ ಇದನ್ನು ಕಾಮನ್ ಎನ್ನೋದು ಮರೆಯಬೇಡಿ.
- ಇಂಟಲಿಜೆನ್ಸ್ ಹಾಗೂ ವಿದ್ಯೆ ಎರಡೂ ಬೇರೆ ಬೇರೆ, ಆಕೆಯಲ್ಲಿ ವಿನಯ ಇದೆಯಾ ಪರಿಶೀಲಿಸಿ.
- ಮದುವೆ ನಂತರ ಅತ್ತೆ ಮಾವನ ಜೊತೆ ಇರಲು ಇಷ್ಟವಿದೆಯಾ? ಇಲ್ಲವಾ? ಕೇಳಿಕೊಳ್ಳಿ.
- ಇತರರ ಬಗ್ಗೆ ಕಾಳಜಿ ಇದೆಯಾ? ಕರುಣೆ ಇದೆಯಾ? ನೋಡಿಕೊಳ್ಳಿ
- ಯಾವ ರೀತಿ ನಿರ್ಧಾರ ತೆಗೆದುಕೊಳ್ಳುವ ಗುಣಗಳಿವೆ ಗಮನಿಸಿ
- ನಿಮ್ಮನ್ನು ಆಕೆ ನಂಬುತ್ತಾರಾ? ನಿಮ್ಮ ನಿರ್ಧಾರವನ್ನು ಗೌರವಿಸುತ್ತಾರಾ? ನೋಡಿ..
- ಪ್ರೀತಿ, ಕಮಿಟ್ಮೆಂಟ್ ಬಗ್ಗೆ ಅವರ ನಿಲುವೇನು? ಅವರನ್ನು ಪ್ರಶ್ನಿಸಿ
- ಆಕೆ ನಿಮ್ಮನ್ನ ನಗಿಸ್ತಾರಾ? ಹೋಗಲಿ ನಿಮ್ಮ ಜೋಕ್ಗೆ ನಗ್ತಾರಾ ಗಮನಿಸಿ..
- ಆಕೆ ಇಂಡಿಪೆಂಡೆಂಟ್ ಆಗಿಯೂ ಇರಲಿ, ಕೆಲವೊಮ್ಮ ನಿಮ್ಮ ಮೇಲೆ ಡಿಪೆಂಡ್ ಆಗಿಯೂ ಇರಲಿ.
- ಮಾತನಾಡುತ್ತಾರಾ? ಮಾತನಾಡುವಲ್ಲಿ ಎಫರ್ಟ್ ಹಾಕ್ತಾರಾ? ಈ ಬಗ್ಗೆ ಗಮನ ಕೊಡಿ.
- ಇಬ್ಬರಿಗೂ ಕಾಮನ್ ಇಂಟ್ರೆಸ್ಟ್ ಇದೆಯಾ? ಇಲ್ಲವಾದರೂ ನಿಮ್ಮ ಇಂಟ್ರೆಸ್ಟ್ ಬಗ್ಗೆ ಅವರಿಗೆ ಇಂಟ್ರೆಸ್ಟ್ ಇದೆಯಾ ನೋಡಿ..