ಸಿಹಿ ಜೊತೆಗೆ ಆರೋಗ್ಯಕರ ಆಹಾರ ʼಓಟ್ಸ್‌ ಲಡ್ಡುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅನೇಕ ಮಂದಿಗೆ ಸಿಹಿ ಅಂದ್ರೆ ತುಂಬಾನೆ ಇಷ್ಟ ಆದರೆ ಸದಾ ಸಿಹಿ ತಿಂದರೆ ಆರೋಗ್ಯ ಹಾಳಾಗತ್ತೆ ಅಂತಲೂ ಯೋಚಿಸುತ್ತಾರೆ. ಅಂತವರಿಗಾಗಿ ಸಿಹಿ ರುಚಿಯ ಜೊತೆಗೆ ಆರೋಗ್ಯಯುತವಾದ ಓಟ್ಸ್‌ ಲಡ್ಡು, ಒಮ್ಮೆ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು

ರೋಲ್ಡ್ ಓಟ್ಸ್
*ಬೆಲ್ಲ (ಕುಟ್ಟಿ ಪುಡಿ ಮಾಡಿರುವಂತಹದ್ದು)
*ಬಿಳಿ ಎಳ್ಳು
*ತುಪ್ಪ
*ಹಸಿರು ಏಲಕ್ಕಿ ಹುಡಿ
*ಒಣದ್ರಾಕ್ಷಿ
*ಕೋಯಾ
*ಬಾದಾಮಿ

ಮಾಡುವ ವಿಧಾನ

1. ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ಎಳ್ಳನ್ನು ಹುರಿದುಕೊಳ್ಳಿ
2. ಇದಕ್ಕೆ ಬಾದಾಮಿಯನ್ನು ಹಾಕಿ ಕೊಂಚ ಸಮಯ ಹುರಿಯಿರಿ.
3. ಪ್ಯಾನ್‎ನಲ್ಲಿ ಓಟ್ಸ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ಹುರಿಯಿರಿ, ತಣ್ಣಗಾದ ನಂತರ ಗ್ರೈಂಡರ್‎ನಲ್ಲಿ ಹುಡಿ ಮಾಡಿ.
4. ಇನ್ನೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ, ಬೆಲ್ಲ ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿಕೊಳ್ಳಿ.
5. ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ ಜೊತೆಗೆ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ
6. ಈಗ ಓಟ್ಸ್, ನಟ್ಸ್ ಮತ್ತು ಎಳ್ಳನ್ನು ಬೆಲ್ಲಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕೆಲವು ನಿಮಿಷ ಬಳಿಕ ನೀರು ಸೇರಿಸಿ.
7. ಈಗ ಮಿಶ್ರಣಕ್ಕೆ ಕೋಯಾವನ್ನು ಸೇರಿಸಿ ಮತ್ತು ಕರಗಲು ಬಿಡಿ. ಚೆನ್ನಾಗಿ ಮಿಶ್ರ ಮಾಡಿ. ಇದರಿಂದ ಗಂಟು ಕಟ್ಟುವುದಿಲ್ಲ
8. ಪ್ಯಾನ್‎ನಿಂದ ಎಲ್ಲಾ ಮಿಶ್ರಣ ಬಿಡಲು ಆರಂಭಗೊಳ್ಳುತ್ತಿದ್ದಂತೆ, ಕೊನೆಯದಾಗಿ ಇದನ್ನು ಮಿಶ್ರಮಾಡಿ ಮತ್ತು ಗ್ಯಾಸ್ ಆಫ್ ಮಾಡಿ.
9. ಮಿಶ್ರಣ ತೆಗೆದುಕೊಂಡು ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ನಂತರ ದ್ರಾಕ್ಷಿ ಮತ್ತು ಬಾದಾಮಿಯಿಂದ ಲಾಡನ್ನು ಸಿಂಗರಿಸಿ

ಈಗ ಓಟ್ಸ್ ಲಡ್ಡು ಸವಿಯಲು ಸಿದ್ಧವಾಗಿದೆ. ಈ ಅದ್ಭುತ ಸಿಹಿಯಾದ ಮತ್ತು ಆರೋಗ್ಯಯುತ ಆಹ್ವಾರವನ್ನು ಒಮ್ಮೆ ಮಾಡಿ ಸವಿದು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!