ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರದ ವಿರುದ್ಧ ಜೊತೆಯಾದ ವಿಪಕ್ಷಗಳು ಈಗಾಗಲೇ ಬಿಹಾರದಲ್ಲಿ ಮೊದಲ ಸಭೆ ನಡೆಸಿದ್ದು, 15ಕ್ಕೂ ಹೆಚ್ಚು ಪಕ್ಷಗಳು ಪಾಲ್ಗೊಂಡಿತ್ತು.
ಇದಾದ ಬಳಿಕ ಎರಡನೇ ಸಭೆಯನ್ನು ಜುಲೈ 13 ಹಾಗೂ 14 ರಂದು ಬೆಂಗಳೂರಿನಲ್ಲಿ ಎ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎರಡನೇ ಸಭೆಗೆ ಮತ್ತೊಂದು ವಿಘ್ನ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿಗೆ ಎನ್‌ಸಿಪಿ ಎರಡು ಹೋಳಾಗಿದೆ. ಹೀಗಾಗಿ ಜುಲೈ 13 ಹಾಗೂ 14 ರಂದು ಆಯೋಜಿಸಲಾಗಿದ್ದ ಸಭೆಯನ್ನು ಮುಂದೂಡಲಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನದ ಬಳಿಕ ಎರಡನೇ ಸಭೆ ದಿನಾಂಕ ಘೋಷಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಕರ್ನಾಟಕ ಹಾಗೂ ಬಿಹಾರದ ಮಳೆಗಾಲ ಅಧಿವೇಶನ ಕೂಡ ಆರಂಭಗೊಂಡಿದೆ. ಹೀಗಾಗಿ ಸಭೆಗೆ ಮುಂದೂಡಲಾಗಿದೆ ಎಂದು ವಿಪಕ್ಷಗಳ ಒಕ್ಕೂಟ ಹೇಳಿದೆ. ಶೀಘ್ರದಲ್ಲೇ ಮುಂದಿನ ಸಭೆ ದಿನಾಂಕ ಘೋಷಣೆ ಮಾಡಲಾಗುವುದು ಎಂದಿದೆ.
ಈಗಾಗಲೇ ವಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ಸಭೆಯಲ್ಲೇ ಆಮ್ ಆದ್ಮಿ ಪಾರ್ಟಿ ಅಸಮಾಧಾನ ವ್ಯಕ್ತಪಡಿಸಿತ್ತು. ಇತ್ತ ಟಿಎಂಸಿ ಕೂಡ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟಿದೆ. ಇದೀಗ ಎನ್‌ಸಿಪಿ ಒಡೆದು ಹೋಳಾಗಿದೆ.