ಹೊಸದಿಗಂತ ವರದಿ, ವಿಜಯಪುರ:
ಟಂಟಂ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಸೋಮವಾರ ನಡೆದಿದೆ.
ಮೃತಪಟ್ಟವನನ್ನು ಇಂಗಳೇಶ್ವರ ತಾಂಡಾ ನಿವಾಸಿ ಸುಬ್ಬು ಅಣಪ್ಪ ಲಮಾಣಿ (55) ಎಂದು ಗುರುತಿಸಲಾಗಿದೆ.
ಬಸವನಬಾಗೇವಾಡಿಯಿಂದ ದೇವರಹಿಪ್ಪರಗಿ ಕಡೆ ಚಲಿಸುತ್ತಿದ್ದ ಟಂಟಂನಲ್ಲಿ ಸುಬ್ಬು ಲಮಾಣಿ ಸೇರಿದಂತೆ 6 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದ್ದು, ಸುಬ್ಬು ಲಮಾಣಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದ್ದು, ಇತರೆ ಪ್ರಯಾಣಿಕರು ಸಣ್ಣ, ಪುಟ್ಟ ಗಾಯಗೊಂಡಿದ್ದಾರೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.