SHOCKING VIDEO| ರೈಲ್ವೆ ಪ್ಲಾಟ್‌ ಫಾರ್ಮ್‌ ಬಳಿ ತುಸು ಜಾಗರೂಕರಾಗರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಣ್ಣ ಪುಟ್ಟ ನಿರ್ಲಕ್ಷ್ಯದಿಂದಲೇ ಜನ ಪ್ರಾಣ ಕಳೆದುಕೊಳ್ಳುವುದನ್ನು ನೀವು ಹಲವು ಬಾರಿ ನೋಡಿರುತ್ತೀರಿ. ಇಂತಹ ವೀಡಿಯೋಗಳು ಹೊರಬಂದರೂ ಜನಕ್ಕೆ ಬುದ್ಧಿ ಬರುತ್ತಿಲ್ಲ. ದೂರ ನಿಂತುಕೊಳ್ಳಿ ಎಂದು ಅಧಿಕಾರಿಗಲೂ ಎಷ್ಟೇ ಹೇಳಿದ್ರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಅದಕ್ಕೇ ಇಂತಹ ಅವಘಡಗಳು ನಡೆಯುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕರು ರೈಲಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಟ್ರ್ಯಾಕ್ ಪಕ್ಕದಲ್ಲಿ ಇಬ್ಬರು ಯುವಕರು ನಿಂತಿದ್ದರು. ಇದರಲ್ಲಿ ಒಬ್ಬ ವ್ಯಕ್ತಿಯು ನೀರಿನ ಬಾಟಲಿಯನ್ನು ತೆಗೆದುಕೊಂಡು ತನ್ನ ಕೈಗಳನ್ನು ತೊಳೆಯಲು ಪ್ರಾರಂಭಿಸುತ್ತಾನೆ. ಅಷ್ಟರಲ್ಲಿ ರೈಲು ಅತಿವೇಗದಲ್ಲಿ ಬಂತು. ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಯುವಕನಿಗೆ ಬಲವಾಗಿ ಬಡಿದಿದೆ.

ಇಂತಹ ಪರಿಸ್ಥಿತಿಯಲ್ಲಿ ಯುವಕರಿಬ್ಬರೂ ದೂರ ಹೋಗಿ ಬಿದ್ದಿದ್ದಾರೆ. ಈ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಈ ವೀಡಿಯೋ ಮುಂಬೈನ ಮಲಾಡ್ ರೈಲು ನಿಲ್ದಾಣಕ್ಕೆ ಸಂಬಂಧಿಸಿದಂತಿದೆ. @MuragundlaVenkyಟ್ವಿಟರ್‌ ಖಾತೆಯಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!