ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಇಂದು ಗ್ಯಾರೆಂಟಿಗಳ ಬಗ್ಗೆ ಚರ್ಚೆಯಾಗಲಿದೆ.
ಸಿದ್ದರಾಮಯ್ಯ ಸರ್ಕಾರ ಘೋಷಿಸಿರುವ ಗ್ಯಾರೆಂಟಿಗಳು ಸಾಕಷ್ಟು ಗೊಂದಲಕ್ಕೀಡುಮಾಡಿವೆ, ಸಾಕಷ್ಟು ಸಮಸ್ಯೆಗಳ ನಡುವೆಯೂ ಸರ್ಕಾರ ಒಂದೊಂದೆ ಗ್ಯಾರೆಂಟಿಯನ್ನು ಜಾರಿ ಮಾಡುತ್ತಾ ಬರುತ್ತಿದೆ. ಆದರೆ ಗ್ಯಾರೆಂಟಿ ಜಾರಿಯಲ್ಲಿಯೂ ಸಾಕಷ್ಟು ಕಂಡೀಷನ್ಗಳನ್ನು ಸರ್ಕಾರ ಹಾಕಿದ್ದು, ಬಿಜೆಪಿ ಇದರ ವಿರುದ್ಧ ತಿರುಗಿ ಬಿದ್ದಿದೆ.
ಇಂದು ಈ ಐದು ಗ್ಯಾರೆಂಟಿಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಬಿಜೆಪಿ ಇದರ ವಿರುದ್ಧವಾಗಿ ಸಾಕಷ್ಟು ಮಾತನಾಡಲಿದೆ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷವೂ ಸಜ್ಜಾಗಿದೆ. ಎಲ್ಲ ಗ್ಯಾರೆಂಟಿಗಳ ಘೋಷಣೆ ಹಾಗೂ ಕಂಡೀಷನ್ ಇಲ್ಲದ ಗ್ಯಾರೆಂಟಿ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಸದನದ ಒಳಗೂ ಹೊರಗೂ ಪ್ರತಿಭಟಿಸುವ ಸಾಧ್ಯತೆ ಇದೆ. ಪ್ರತಿಭಟನೆ ಮೂಲಕ ಕಾಂಗ್ರೆಸ್ಗೆ ಒತ್ತಡ ನೀಡುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ.