SHOCKING VIDEO| ವಾಕಿಂಗ್‌ ಹೋಗ್ತಿದಿರಾ? ಕಣ್ಣು ಮಿಟುಕಿಸುವಷ್ಟರಲ್ಲಿ ಎಂಥ ದುರಂತ ನಡೆದಿದೆ ನೋಡಿ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಡಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಪ್ರತಿದಿನ ಸ್ವಲ್ಪ ಕಾಲ ನಡೆದರೆ ಪರಿಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ತಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ವಾಕಿಂಗ್ ರೂಢಿಸಿಕೊಳ್ಳುತ್ತಾರೆ.

ಈ ವಾಕಿಂಗ್ ಹೋಗುವಾಗ ತುಂಬಾ ಜಾಗರೂಕರಾಗಿರಬೇಕು. ರಸ್ತೆಯಲ್ಲಿ ಹೋಗುವಾಗ ಎಚ್ಚರದಿಂದಿರಿ. ರಸ್ತೆ ದಾಟುವಾಗ, ಒಂದು ಕ್ಷಣ ನಿಂತು, ಮುಂದೆ-ಹಿಂದೆ ನೋಡಿ ರಸ್ತೆ ದಾಟಿ ಇಲ್ಲದಿದ್ದರೆ, ಏನಾದರೂ ಕೆಟ್ಟದು ಸಂಭವಿಸಬಹುದು. ನಿಮ್ಮ ಪ್ರಾಣವು ಗಾಳಿಯಲ್ಲಿ ಕಳೆದು ಹೋಗಬಹುದು. ಹರಿಯಾಣದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಹಾಗೆಯೇ ಹೊಟು ಹೋಗಿದೆ. ಪಾಲಂ ವಿಹಾರ್ ಇ-ಬ್ಲಾಕ್‌ನ ವೃದ್ಧೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅಷ್ಟರಲ್ಲಿ ವೆರ್ನಾ ಕಾರು ಆಕೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಕಾರು ಆಕೆ ಕತ್ತಿನ ಮೇಲೆ ಹರಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ವಾಕಿಂಗ್ ಹೋಗುವಾಗ ಎಚ್ಚರಿಕೆ ವಹಿಸಿ ರಸ್ತೆಯಲ್ಲಿ ಮುಂದೆ-ಹಿಂದೆ ನೋಡಿಕೊಂಡು ನಡೆಯುವಂತೆ ಪೊಲೀಸರು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!