ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿಯರನ್ನು ಭಾರತ ಸ್ವಾಗತಿಸುತ್ತದೆ, ಪ್ರೀತಿಯಿಂದ ಅತಿಥಿ ಸತ್ಕಾರ ಮಾಡಿ ಕಳುಹಿಸುತ್ತದೆ. ಆದರೆ ಎಲ್ಲೋ ಕೆಲ ನೀಚ ವ್ಯಕ್ತಿಗಳಿಂದ ವಿದೇಶಿಗರಿಗೆ ಲೈಂಗಿಕ ಕಿರುಕುಳವಾಗುತ್ತಿದೆ. ಇದರಿಂದಾಗಿ ಭಾರತದ ಬಗ್ಗೆಯೇ ವಿದೇಶಿಗರಿಗೆ ನಕಾರಾತ್ಮಕ ಭಾವನೆ ಮೂಡುವಂತಾಗುತ್ತದೆ. ತಮ್ಮ ದೇಶಕ್ಕೆ ಮರಳಿ ಭಾರತದಲ್ಲಿ ಕೆಟ್ಟ ಅನುಭವವಾಗಿದೆ ಎಂದು ವಿದೇಶಿಗರು ಹೇಳುತ್ತಾರೆ.
ಇಂಥದ್ದೇ ಒಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ವಿದೇಶಿ ಮಹಿಳೆಯ ಮೈ ಕೈ ಮುಟ್ಟುವ ವಿಡಿಯೋ ವೈರಲ್ ಆಗಿದೆ. ಆಕೆ ಲೈವ್ನಲ್ಲಿದ್ದರೂ ಆಕೆಯ ಕೈ, ಹೆಗಲು ಹಾಗೂ ಎದೆ ಭಾಗವನ್ನು ಮುಟ್ಟಲು ಆತ ಪದೇ ಪದೆ ಪ್ರಯತ್ನಿಸುತ್ತಾನೆ. ಮೊದಲು ಆತನ ಬಗ್ಗೆ ಅನುಮಾನ ಬಾರದೇ ಇದ್ದರೂ ತದನಂತರ ಅವನ ಉದ್ದೇಶ ಅರಿತ ವಿದೇಶಿ ಮಹಿಳೆ ಕೈಯನ್ನು ತೆಗೆಸುತ್ತಾಳೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇಂಥವರಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು ಎನ್ನುವ ಕಮೆಂಟ್ಸ್ಗಳು ಬರುತ್ತಿವೆ.
https://twitter.com/SwatiJaiHind/status/1675803922802278400?s=20