ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತನ್ನೇ ಬೆಚ್ಚಿಬೀಳಿಸಿದ ಬಾಲಸೋರ್ ರೈಲು ದುರಂತಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇದೀಗ ಉತ್ತರ ದೊರಕಿದೆ.
290 ಜನರನ್ನು ಬಲಿ ಪಡೆದ ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಮಾನವ ಲೋಪವೇ ಕಾರಣವಾಗಿದೆ. ತಪ್ಪಾದ ಸಿಗ್ನಲ್ಸ್ ಹಾಗೂ ಸಿಬ್ಬಂದಿ ಅಚಾತುರ್ಯವೇ ಇದಕ್ಕೆ ಕಾರಣ ಎಂದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
ರೈಲ್ವೆ ಸುರಕ್ಷತಾ ಆಯೋಗವು ರೈಲ್ವೆ ಮಂಡಳಿಗೆ ಸಲ್ಲಿಸಿದ ಸ್ವತಂತ್ರ ತನಿಖಾ ವರದಿಯಲ್ಲಿ ಇದು ಸಿಗ್ನಲಿಂಗ್ ಲೋಪ, ಜೊತೆಗೆ ಎರಡು ಲೇನ್‌ಗಳನ್ನು ಸಂಪರ್ಕಿಸುವ ವ್ಯವಸ್ಥೆಯಲ್ಲಿನ ದೋಷದ ಬಗ್ಗೆ ಸಿಬ್ಬಂದಿ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಈ ಅಪಘಾತವಾಗಿದೆ.
ರೈಲ್ವೆ ಟ್ರಾಕ್ ಮೇಲ್ವಿಚಾರಕರ ತಂಡ ವೈರಿಂಗ್ ಬದಲಾಯಿಸಿದೆ ಆದರೆ ಮೊದಲಿನಂತೆ ಪುನಸ್ಥಾಪಿಸಲು ವಿಫಲವಾಗಿದೆ, ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.