ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿತಾರಾ ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅವರ ಮಗಳು ಎಂದು ಎಲ್ಲರಿಗೂ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಿತಾರಾ, ಯೂಟ್ಯೂಬ್ನಲ್ಲಿ ವಿಡಿಯೋ ಮಾಡುತ್ತಾ ತನ್ನದೇ ಆದ ಐಡೆಂಟಿಟಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾಗಳಲ್ಲದೆ ಕಮರ್ಷಿಯಲ್ ಜಾಹಿರಾತುಗಳನ್ನೂ ಮಾಡುತ್ತಿರುವ ಮಹೇಶ್ ಹಲವು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಈಗ ಮಗಳು ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.
ಸಿತಾರಾ ಈಗಾಗಲೇ ಮಹೇಶ್ ಬಾಬು ಅವರೊಂದಿಗೆ ಅನೇಕ ಧಾರಾವಾಹಿ ಪ್ರಚಾರ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರೂ, ಈಗ ಸಿಂಗಲ್ ಆಗಿ ಕಮರ್ಷಿಯಲ್ ಆ್ಯಡ್ ಮಾಡಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿತಾರಾ ಪ್ರಸಿದ್ಧ ಆಭರಣ ಬ್ರ್ಯಾಂಡ್ಗೆ ರಾಯಭಾರಿಯಾಗಿದ್ದಾರೆ. ಈ ಬ್ರ್ಯಾಂಡ್ನ ಜಾಹೀರಾತು ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದ್ದು, ಸಿತಾರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೂಟಿಂಗ್ ಸೆಟ್ನ ವೀಡಿಯೊ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಿತಾರ ಅವರ ಜಾಹೀರಾತಿಗೆ ಸಂಬಂಧಿಸಿದ ಕೆಲವು ಫೋಟೋಗಳು ಬಿಡುಗಡೆಯಾಗಿವೆ. ಅದಲ್ಲದೆ ಸಿತಾರಾ ಆಭರಣ ತೊಟ್ಟಿರುವ ಫೋಟೋಗಳು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರಚಾರದಲ್ಲಿವೆ. ಈ ಒಂದು ಜಾಹೀರಾತಿನ ಮೂಲಕ ಸಿತಾರಾ ಎಲ್ಲೋ ಹೋಗಿ ತಂದೆಯನ್ನು ಮೀರಿಸಿದ್ದಾರೆ ಎಂಬ ಕಮೆಂಟ್ಗಳು ಹರಿದಾಡುತ್ತಿವೆ. ಆಭರಣ ಬ್ರ್ಯಾಂಡ್ ಹೈದರಾಬಾದ್ನಲ್ಲಿ ಹೊಸ ಶಾಖೆಯನ್ನು ಸಹ ತೆರೆಯಲಿದೆ. ಸಿತಾರಾ ಹೆಸರಿನಲ್ಲಿ ಹೊಸ ವಿನ್ಯಾಸಗಳನ್ನು ಕೂಡ ರಚಿಸಿದೆ ಎಂದು ವರದಿಯಾಗಿದೆ.