ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗೆ ತಮ್ಮ ಮದುವೆ ವಿಚಾರದಲ್ಲಿ ಭಾರೀ ಸುದ್ಧಿಯಲ್ಲಿದ್ದರು. ಆ ಬಳಿಕ ಸೈಲೆಂಟ್ ಆಗಿದ್ದ ರಾಖಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಆದ್ರೆ ಈ ಬಾರಿ ನಟ ಸಲ್ಮಾನ್ ಖಾನ್ ಅವರ ಮದುವೆ ವಿಚಾರವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ.
ರಾಖಿ ಸಾವಂತ್ ಏರ್‌ಪೋರ್ಟ್‌ನಲ್ಲಿ ಹೈ ಡ್ರಾಮಾ ಶುರು ಮಾಡಿಕೊಂಡಿದ್ದು, ಅದೇನೆಂದರೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಖಿ ಸಾವಂತ್ ಮುಖ ಮುಚ್ಚಿಕೊಂಡು ಬರುವಾಗ ಯಾಕೆ ಚಪ್ಪಲಿ ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ. ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್ಗೆ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ.