ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣ: ಇಬ್ಬರು ಮಕ್ಕಳು ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಲೈ 1ರಂದು ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ಈ ಘಟನೆ ನಡೆದಿತ್ತು. ಕಲ್ಲಿನ ಏಟಿಗೆ ರೈಲಿನ ಕಿಟಕಿಯ ಗಾಜಿಗೆ ಹಾನಿಯಾಗಿತ್ತು.

ಈ ಇಬ್ಬರು ಮಕ್ಕಳು ದಾವಣಗೆರೆಯ ಎಸ್‌ಎಸ್ ನಗರ ಹಾಗೂ ಭಾಷಾ ನಗರದವರು ಎಂದು ತಿಳಿದು ಬಂದಿದೆ. ಕಲ್ಲೆಸೆದ ನಂತರ ಇಬ್ಬರು ಪರಾರಿಯಾಗಿದ್ದರು.

ಸದ್ಯ ದಾವಣಗೆರೆ ರೈಲ್ವೆ ಪೊಲೀಸರು ಇಬ್ಬರು ಮಕ್ಕಳನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಿದ್ದಾರೆ. ಈ ಘಟನೆಯ ಕುರಿತು ರೈಲ್ವೆ ಆರ್‌ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!