ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ತೌಬಲ್‌ನಲ್ಲಿ ಗುಂಪೊಂದು ಭಾರತೀಯ ರಿಸರ್ವ್ ಬೆಟಾಲಿಯನ್ ಸಿಬ್ಬಂದಿ ಮನೆಗೆ ಬೆಂಕಿ ಹಚ್ಚಿದೆ.
ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ಐಆರ್‌ಬಿ ಶಿಬಿರದ ಮೇಲೆ ಗುಂಪು ದಾಳಿ ಮಾಡಲು ಯತ್ನಿಸಿತ್ತು. ಈ ವೇಳೆ ಘರ್ಷಣೆಯಾಗಿ ರೊನಾಲ್ಡೊ ಎಂಬಾತ ಮೃತಪಟ್ಟಿದ್ದರು. ಇದರಿಂದಾಗಿ ಪರಿಸ್ಥಿತಿ ಹತೋಟಿಗೆ ಸಿಗಲಿಲ್ಲ.
ಈ ಸಿಟ್ಟಿನಲ್ಲಿ ಐಆರ್‌ಬಿ ಸಿಬ್ಬಂದಿ ಮನೆಯ ಮೇಲೆ ಗುಂಪು ದಾಳಿ ಮಾಡಿ ಬೆಂಕಿ ಹಚ್ಚಿದೆ. ಘರ್ಷಣೆ ವೇಳೆ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.