ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ತಮ್ಮ ಪುಟಾಣಿ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟಾಣಿ ಸಾಕ್ಷಿಗೆ ಕಿಚ್ಚ ಅಂದ್ರೆ ಎಲ್ಲಿಲ್ಲದ ಪ್ರೀತಿ. ಕಿಚ್ಚ ಸುದೀಪ್ ಅವರನ್ನು ನೋಡೋದು ನನ್ನ ಆಸೆ ಎಂದು ಸಾಕ್ಷಿ ಹೇಳುತ್ತಿದ್ದರು. ಬಾಲಕಿಯ ಕ್ಯಾನ್ಸರ್ ಬಗ್ಗೆ ತಿಳಿದ ಸುದೀಪ್ ಖುದ್ದು ಅವರೇ ಹೋಗಿ ಬಾಲಕಿಯನ್ನು ಭೇಟಿ ಮಾಡಿ ಬಂದಿದ್ದಾರೆ.
ಆಟೋಗ್ರಾಫ್ ನೀಡಿ, ಮಗುವಿನ ಆಸೆಯನ್ನು ಈಡೇರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊಗಳು ವೈರಲ್ ಆಗಿದ್ದು, ಅಭಿಮಾನಿಯ ಆಸೆ ಈಡೇರಿಸಿದ ಸುದೀಪ್ ಬಗ್ಗೆ ಅಭಿಮಾನ ಹೆಚ್ಚಾಗಿದೆ ಎಂದಿದ್ದಾರೆ.