ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾದ ಅಜಿತ್ ಪವಾರ್ ಅವರು ಬುಧವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್ಸಿಪಿ ಶಾಸಕರ ಪೈಕಿ 35 ಶಾಸಕರು ಹಾಜರಿದ್ದರು.
ಉಪನಗರ ಬಾಂದ್ರಾದಲ್ಲಿ ನಡೆಯುತ್ತಿರುವ ಅಜಿತ್ ಪವಾರ್ ಶಕ್ತಿ ಪ್ರದರ್ಶನದ ಸಭೆಯಲ್ಲಿ ಎಂಟು ಎನ್ಸಿಪಿ ಎಂಎಲ್ಸಿಗಳ ಪೈಕಿ ಐವರು ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ ಪ್ರಕಾರ, ಅಜಿತ್ ಪವಾರ್ ಅವರ ಬಣ ಅನರ್ಹತೆಯಿಂದ ತಪ್ಪಿಸಲು ಕನಿಷ್ಠ 36 ಶಾಸಕರ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ಅವರು ದಕ್ಷಿಣ ಮುಂಬೈನ ಯಶವಂತರಾವ್ ಚವಾಣ್ ಸೆಂಟರ್ ನಲ್ಲಿ ಪಕ್ಷದ ನಾಯಕರ ಸಭೆ ಕರೆದಿದ್ದಾರೆ. ಶರದ್ ಪವಾರ್ ಅವರ ಸಭೆಯಲ್ಲಿ ಕೇವಲ 13 ಶಾಸಕರು ಭಾಗವಹಿಸಿದ್ದಾರೆ ಎನ್ನಲಾಗಿದೆ.