ತೆರೆಗೆ ಬರಲು ಸಜ್ಜಾದ ನಟಿ ಕಂಗನಾ ರಣಾವತ್ ‘ತೇಜಸ್’ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ತೇಜಸ್ (Tejas) ಹೆಸರಿನಲ್ಲಿ ಈ ಸಿನಿಮಾ ಅಕ್ಟೋಬರ್ 20 ರಂದು ದೇಶದಾದ್ಯಂತ ಬಿಡುಗಡೆ (Release) ಆಗಲಿದೆ.

ಇದೇ ಮೊದಲ ಬಾರಿಗೆ ಕಂಗನಾ ರಣಾವತ್, ಪೈಲೆಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಸ್ವತಃ ಕಂಗನಾ ಘೋಷಿಸುವ ಮೂಲಕ, ಈ ಸಿನಿಮಾವನ್ನು ವಾಯು ಸೇನೆಯ ಎಲ್ಲ ಪೈಲೆಟ್ ಗಳಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

ಸರ್ವೇಶ ಮೇವರಾ (Sarvesha Mewara) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಮಹಿಳಾ ಪೈಲಟ್ ಒಬ್ಬರ ಜೀವನಗಾಥೆಯನ್ನು ಅದು ತೆರೆದಿಡಲಿದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಅವರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸುತ್ತಿದ್ದು, ತೇಜಸ್ ಸಿನಿಮಾವಾದರೂ ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

ಒಂದು ಕಡೆ ತೇಜಸ್ ರಿಲೀಸ್ ಆಗುತ್ತಿದ್ದರೆ, ಮತ್ತೊಂದು ಕಡೆ ತಾವೇ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡುತ್ತಿರುವ ಎಮರ್ಜೆನ್ಸಿ (Emergency) ಸಿನಿಮಾ ಕೂಡ ಬಹುತೇಕ ಶೂಟಿಂಗ್ ಮುಗಿದಿದೆ. ಅದರ ತಯಾರಿಯಲ್ಲೂ ಕಂಗನಾ ತೊಡಗಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದು ಎಮರ್ಜೆನ್ಸಿ ಕರಾಳತೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರಂತೆ ಕಂಗನಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!