ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಬಂಡಾಯ ಬಣ, ಪಕ್ಷದ ರಾಷ್ಟ್ರೀಯ ಶರದ್ ಪವಾರ್ ಅವರನ್ನೇ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದೆ.
ಎರಡು ದಶಕಗಳ ಹಿಂದೆ ತಾವೇ ಸ್ಥಾಪಿಸಿ ಮುನ್ನಡೆಸಿದ್ದ ಪಕ್ಷದಿಂದ ಇದೀಗ ಶರದ್ ಪವಾರ್ ಗೆ ಗೇಟ್ ಪಾಸ್ ಸಿಕ್ಕಿದೆ.
ಅಜಿತ್ ಬಂಡಾಯ ಬಣ ಪಕ್ಷದ ಹೆಸರು ಮತ್ತು ಚಿಹ್ನೆ ತಮಗೆ ನೀಡುವಂತೆ ಕೋರಿ ಅಜಿತ್ ಪವಾರ್ ನೇತೃತ್ವದ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ತಮಗೆ 40ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರ ಬೆಂಬಲ ಇದೆ ಎಂದು ಅಜಿತ್ ಪವಾರ್ ಬಣ ಚುನಾವಣಾ ಆಯೋಗಕ್ಕೆ ಅಫಿಡವಿಟ್ಗಳನ್ನು ಸಲ್ಲಿಸಿದೆ.
ಇದನ್ನು ವಿರೋಧಿಸಿ ಶರದ್ ಪವಾರ್ ಪಾಳಯ, ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದ್ದು, ಬಣ ಜಗಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನವನ್ನು ನೀಡುವ ಮುನ್ನ ತಮ್ಮ ವಾದವನ್ನು ಆಲಿಸುವಂತೆ ಒತ್ತಾಯಿಸಿದೆ
ಪಕ್ಷದ ಚುನಾವಣಾ ಚಿನ್ಹೆಯನ್ನು ಉಳಿಸಿಕೊಂಡೇ ಸಿದ್ಧ ಎಂದು ಶರದ್ ಪವಾರ್ ಬೆಂಬಲಿಗರಿಗೆ ಭರವಸೆಯನ್ನೂ ನೀಡಿದ್ದಾರೆ.ನಮ್ಮೊಂದಿಗೆ ಎಷ್ಟು ಶಾಸಕರು ಇದ್ದಾರೆ ಎಂಬುದು ಇಂದಿನ ಚರ್ಚೆಯಾಗಿದೆ. ನಾನು ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಹಿಂದೆ ನನ್ನ ಬಳಿ 68 ಶಾಸಕರಿದ್ದರು, ನಾನು ಕೆಲವು ಸಮಯ ಹೊರಗೆ ಹೋದಾಗ 62 ಜನರು ನಮ್ಮನ್ನು ತೊರೆದರು, ನನಗೆ ಕೇವಲ ಆರು ಮಂದಿ ಇದ್ದರು. ಚುನಾವಣೆಯಲ್ಲಿ 62ರಲ್ಲಿ ನಾಲ್ವರು ಮಾತ್ರವೇ ಮರಳು ಬರಲು ಸಾಧ್ಯವಾಯಿತು. ನಾವು ಹೊಸ ಮುಖಗಳೊಂದಿಗೆ ಗೆದ್ದಿದ್ದೇವೆ ಎಂದು ಅವರು ಹೇಳಿದರು.