ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಈಗಾಗಲೇ ಮುಂಗಾರು ಪ್ರವೇಶ ಪಡೆದುಕೊಂಡಿದ್ದು, ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ರಸ್ತೆ ಸಂಪರ್ಕ ಕಡಿತ, ರಸ್ತೆಗಳ ಡಾಂಬರ್ ಕಿತ್ತು ಹೋಗಿರುವ ಘಟನೆಗಳು ನಡೆದಿದೆ.
ಆಂಧ್ರ ಪ್ರದೇಶದ ಪಾಲಂಡು ಜಿಲ್ಲೆಯ ಪಮಿದಿಮಾರು ಗ್ರಾಮದಲ್ಲಿ ರಸ್ತೆಗಳ ಡಾಂಬರ್ ಕಿತ್ತು ಅವಘಡ ಸಂಭವಿಸಿದ್ದು, ಶಾಲಾ ವಾಹನ ಪಲ್ಟಿಯಾಗಿ 15 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.
ಶಾಲೆ ಮುಗಿಸಿ ಸಂಜೆ ಮಕ್ಕಳನ್ನು ಹೊತ್ತುಕೊಂಡು ಮನೆಯತ್ತ ಸಾಗುತ್ತಿದ್ದ ಬಸ್ ವಿಪರೀತ ಮಳೆಯಿಂದ ಹಾಳಾದ ರಸ್ತೆ ಮೂಲಕ ಸಾಗಿದೆ. ಈ ವೇಳೆ ಏಕಾಏಕಿ ಬಸ್ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಬಸ್ ಪಕ್ಕದ ಹೊಲಕ್ಕೆ ಪಲ್ಟಿಯಾಗಿದೆ. ಬಸ್ ಪಲ್ಟಿಯಾದ ರಭಸಕ್ಕೆ ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿದೆ.
ತಕ್ಷಣವೇ ಸ್ಥಳೀಯರು ಧಾವಿಸಿ ಪಲ್ಟಿಯಾದ ಬಸ್ನಿಂದ ಮಕ್ಕಳನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಪೊಲೀಸರು ಮಾಹಿತಿ ತಿಳಿದಿ ಸ್ಥಳಕ್ಕೆ ಧಾವಿಸಿದ್ದಾರೆ. ಜಂಟಿ ಕಾರ್ಯಾಚರಣೆ ಮೂಲಕ ಎಲ್ಲಾ ಮಕ್ಕಳನ್ನು ಪಲ್ಟಿಯಾದ ಬಸ್ನಿಂದ ರಕ್ಷಿಸಿದ್ದಾರೆ. ಇತ್ತ ಗಾಯಗೊಂಡ 15 ಮಕ್ಕಳನ್ನು ಆಸ್ಪತ್ರೆ ದಾಖಲಿಸಿದ್ದಾರೆ.