ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಕೇಂದ್ರ ಸರಕಾರ ಪ್ರಯತ್ನ ಆರಂಭಿಸಿದ್ದು, ಈಗಾಗಲೇ ಉತ್ತರಾಖಂಡ್ ರಾಜ್ಯ ಕರಡನ್ನು ಸಿದ್ಧಪಡಿಸಿದೆ.
ಆದ್ರೆ ಇತ್ತ ಈ ನಡೆ ವಿಪಕ್ಷಗಳ ತಲೆನೋವಿಗೆ ಕಾರಣವಾಗಿದೆ.ಕಾಂಗ್ರೆಸ್ ಸೇರಿದಂತೆ ಇತರ ಕೆಲ ಪಕ್ಷಗಳು ಬಿಲ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಇತ್ತ ಕೆಲ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದೆ.
ಅದೇ ರೀತಿ ಏಕರೂಪ ನಾಗರೀತ ಸಂಹಿತೆಯನ್ನು ಮುಸ್ಲಿಂ ಸಮುದಾಯ ವಿರೋಧಿಸುತ್ತಿದೆ. ಲಖನೌದಲ್ಲಿ ನಡೆದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹತ್ವದ ಸಭೆ ನಡೆಸಿ, ಭಾರಿ ವಿರೋಧ ವ್ಯಕ್ತಪಡಿಸಿದೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಾರ್ಯಾಕಾರಿಣಿ ಸಮಿತಿ, ಏಕರೂಪ ನಾಗರೀಕ ಸಂಹಿತ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಜೂನ್ 27 ರಂದು ರಚಿಸಿದ್ದ ಕರಡು ಪ್ರತಿಕ್ರಿಯೆ ಕುರಿತು ಗಂಭೀರ ಚರ್ಚೆ ನಡೆಸಿದೆ. ಇದೀಗ ಕೇಂದ್ರ ಕಾನೂನು ಆಯೋಗಕ್ಕೆ ದೂರು ನೀಡಲು ಬೋರ್ಡ್ ನಿರ್ಧರಿಸಿದೆ.
ಕೇಂದ್ರ ಕಾನೂನು ಆಯೋಗ ಏಕರೂಪ ನಾಗರೀಕ ಸಂಹಿತೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜುಲೈ 14ರ ವರೆಗೆ ಕಾಲಾವಕಾಶ ನೀಡಿದೆ. ಇದೇ ವೇಳೆ ಭಾರತದ ಸಂವಿಧಾನವೇ ಏಕರೂಪವಲ್ಲ. ಹೀಗಿರುವಾಗ ಭಾರತಕ್ಕೆ ಏಕರೂಪ ನಾಗರೀಕ ಸಂಹಿತೆಯ ಅವಶ್ಯಕತೆ ಏನಿದೆ? ಕೇವರ ಆದಿವಾಸಿಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಇದು ಸೂಕ್ತವಲ್ಲ. ಏಕರೂಪ ನಾಗರೀಕ ಸಂಹಿತೆಯನ್ನು ಕನಿಷ್ಠ ಅಲ್ಪಸಂಖ್ಯಾತರಿಗೆ ಅನ್ವಯಿಸಬಾರದು ಎಂದು ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ದೂರಿನಲ್ಲಿ ಉಲ್ಲೇಖಿಸಿದೆ.