ಮಳೆ ಆರಂಭವಾಯ್ತು, ಇನ್ನು ಶೀತ, ಜ್ವರ, ಕೆಮ್ಮು ತಲೆನೋವು ಮಾಮೂಲು, ಇದರಿಂದ ದೂರ ಇರೋಕೆ, ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು, ಕೆಲವು ಟಿಪ್ಸ್ ಹೀಗಿದೆ..
- ಕಾಯಿಸಿ, ಆರಿಸಿದ ನೀರು ಕುಡಿಯಿರಿ
- ರಸ್ತೆ ಬದಿ ಆಹಾರ ತಿನ್ನಬೇಡಿ
- ಮನೆಯ ಸುತ್ತಮುತ್ತ ನೀರು ನಿಲ್ಲಲು ಬಿಡಬೇಡಿ, ಸೊಳ್ಳೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
- ಹಣ್ಣು ತರಕಾರಿಗಳನ್ನು ಎರಡು ಬಾರಿ ತೊಳೆದು ಬಳಸಿ
- ಹೆಚ್ಚು ಸಮಯ ನಿದ್ದೆ ಮಾಡಿ
- ಮಳೆಗಾಲ ಎಂದು ವ್ಯಾಯಾಮ ಮಾಡೋದು ನಿಲ್ಲಿಸಬೇಡಿ
- ಆಗಾಗ ಕೈಗಳನ್ನು ಹ್ಯಾಂಡ್‌ವಾಶ್ ಬಳಸಿ ತೊಳೆಯಿರಿ
- ಮಳೆಯಲ್ಲಿ ಹೆಚ್ಚು ನೆನೆಯುವುದು ಬೇಡ
- ಬಿಸಿ ಬಿಸಿ ಆಹಾರ ಸೇವಿಸಿ
- ಸೊಳ್ಳೆಗಳನ್ನು ದೂರ ಇಡಲು ಮನೆಯಲ್ಲಿ ಕಾಯಿಲ್, ಸೊಳ್ಳೆ ಬ್ಯಾಟ್, ರಿಪೆಲ್ಲೆಂಟ್ ಇರಲಿ
- ಮಲ್ಟಿವಿಟಮಿನ್‌ಗಳ ಸೇವನೆ ಮಾಡಿ
- ಬಿಸಿ ನೀರಿನ ಸ್ನಾನ ಮಾಡಿ
- ಪ್ರತಿದಿನ ರಾತ್ರಿ ಅರಿಶಿಣ ಹಾಲು ಸೇವನೆ ಮಾಡಿ