ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 1ರಂದು ಯಾತ್ರೆ ಪ್ರಾರಂಭವಾದಾಗಿನಿಂದ ಒಟ್ಟು 67,566 ಯಾತ್ರಾರ್ಥಿಗಳು ಅಮರನಾಥ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಬುಧವಾರ 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಅಮರನಾಥ ಗುಹೆ ದೇಗುಲಕ್ಕೆ ತೆರಳಿದರು.
ಇವರಲ್ಲಿ 12483 ಪುರುಷರು, 5146 ಮಹಿಳೆಯರು, 457 ಮಕ್ಕಳು, 266 ಸಾಧುಗಳು ಮತ್ತು 2 ಸಾಧ್ವಿಗಳು ಸೇರಿದ್ದಾರೆ. “ಆರಂಭದಿಂದಲೂ ಇಲ್ಲಿವರೆಗೆ ದರುಶನ ಮಾಡಿದ ಒಟ್ಟು ಯಾತ್ರಿಗಳ ಸಂಖ್ಯೆ 67,566. ಮುಂದಿನ ದಿನಗಳಲ್ಲಿ ಹೆಚ್ಚಿನ ಯಾತ್ರಿಗಳು ದೇಗುಲಕ್ಕೆ ಭೇಟಿ ನೀಡಲಿದ್ದಾರೆ” ಎಂದು ನಂಬಲಾಗಿದೆ.
ಯಾತ್ರಾರ್ಥಿಗಳ ಪ್ರಯಾಣದ ಸಮಯದಲ್ಲಿ ರಾಜ್ಯ ಸಂಸ್ಥೆಗಳು ಮತ್ತು ನಾಗರಿಕ ಇಲಾಖೆಗಳಿಂದ ಭಕ್ತರಿಗೆ ಬೇಕಿರುವ ಎಲ್ಲಾ ಅಗತ್ಯ ವಸ್ತುಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಹಾಯ ಮಾಡಲಾಗುತ್ತಿದೆ. “ಪೊಲೀಸ್, ಎಸ್‌ಡಿಆರ್‌ಎಫ್, ಸೈನ್ಯ, ಅರೆಸೇನಾ, ಆರೋಗ್ಯ, ಪಿಡಿಡಿ, ಪಿಎಚ್‌ಇ, ಯುಎಲ್‌ಬಿ, ಮಾಹಿತಿ, ಕಾರ್ಮಿಕ, ಅಗ್ನಿಶಾಮಕ ಮತ್ತು ತುರ್ತು, ಶಿಕ್ಷಣ ಮತ್ತು ಪಶುಸಂಗೋಪನೆ ಸೇರಿದಂತೆ ಎಲ್ಲಾ ಇಲಾಖೆಗಳು ಅವಶ್ಯಕತೆಗಳನ್ನು ಪೂರೈಸುತ್ತದೆ.
62 ದಿನಗಳ ಅವಧಿಯ ಶ್ರೀ ಅಮರನಾಥ ಯಾತ್ರೆಯು ಆಗಸ್ಟ್ 31, 2023 ರಂದು ಮುಕ್ತಾಯಗೊಳ್ಳಲಿದೆ.