ಮಳೆಗಾಲದಲ್ಲಿ ಟ್ರಾವೆಲ್ ಮಾಡೋದರ ಮಜವೇ ಬೇರೆ, ಸಾಕಷ್ಟು ತೊಂದರೆಗಳು ಎದುರಾಗಬಹುದು, ಆದರೂ ಅದ್ಭುತ ಅನುಭವ ನಿಮ್ಮದಾಗುತ್ತದೆ. ಮಳೆಗಾಲದಲ್ಲಿಯೇ ವೀಕ್ಷಿಸಬೇಕಾದ ಸಾಕಷ್ಟು ಸ್ಥಳಗಳಿವೆ, ಇಲ್ಲಿಗೆ ಟ್ರಿಪ್ ಹೋಗುವ ಮುನ್ನ ಈ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ..
ಮುಂದಿನ ಮೂರು ನಾಲ್ಕು ದಿನಗಳ ವೆದರ್ ರಿಪೋರ್ಟ್ ಓದಿಕೊಳ್ಳಿ, ತೀರಾ ಕೆಟ್ಟ ಹವಾಮಾನ ಪರಿಸ್ಥಿತಿ ಇದ್ದರೆ ಟ್ರಿಪ್ ಪೋಸ್ಟ್‌ಪೋನ್ ಮಾಡಿ.
ಮಳೆಗಾಲದಲ್ಲಿ ಆರೋಗ್ಯ ಕೈಕೊಡೋದು ಹೊಸತೇನಲ್ಲ, ನಿಮ್ಮ ಆರೋಗ್ಯ ಸುಧಾರಿಸೋಕೆ ಬೇಕಾದ ಮಾತ್ರೆಗಳು, ಸೊಳ್ಳೆಗಳನ್ನು ಓಡಿಸೋ ಕಾಯಿಲ್ ಜೊತೆಯಿರಲಿ.
ವಾಟರ್‌ಪ್ರೂಫ್ ಬಟ್ಟೆಗಳು, ಛತ್ರಿ, ಪ್ಲಾಸ್ಟಿಕ್ ಕವರ್‌ಗಳು, ಒಂದೆರಡು ಜೊತೆ ಹೆಚ್ಚು ಬಟ್ಟೆ ಹಾಗೂ ಒಳಉಡುಪುಗಳನ್ನು ಪ್ಯಾಕ್ ಮಾಡಿ.
ಮಕ್ಕಳ ಜೊತೆ ಟ್ರಾವೆಲ್ಲಿಂಗ್ ಮಾಡುವುದಾದರೆ ಸೇಫ್ ಇರುವ ಜಾಗವನ್ನೇ ಆರಿಸಿ, ಮಕ್ಕಳ ಜೊತೆ ರಿಸ್ಕಿ ಸ್ಥಳಗಳಿಗೆ ಹೋಗೋದು ಸೂಕ್ತ ಅಲ್ಲ.
ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳಿಗೆ ವಾಟರ್‌ಪ್ರೂಫ್ ಕವರ್‌ಗಳನ್ನು ತೆಗೆದುಕೊಂಡು ಹೋಗಿ.
ಎಲ್ಲೆಂದರಲ್ಲಿ, ಯಾವುದೆಂದರೆ ಆ ನೀರನ್ನು ಕುಡಿಯುವುದು ಬೇಡ, ನಿಮ್ಮದೇ ವಾಟರ್ ಬಾಟಲ್ ಕ್ಯಾರಿ ಮಾಡಿ, ನೀರಿನಿಂದಲೇ ರೋಗಗಳು ಸುಲಭವಾಗಿ ಹರಡುತ್ತವೆ ನೆನಪಿರಲಿ.
ರಸ್ತೆಯಲ್ಲಿ ಸಿಗುವ ಎಣ್ಣೆಯಲ್ಲಿ ಕರಿದ ಆಹಾರ, ಜಂಕ್ ಫುಡ್ ಅವಾಯ್ಡ್ ಮಾಡಿದಷ್ಟು ಉತ್ತಮ
ಹೇರ್ ಡ್ರೈಯರ್, ವಾಟರ್ ಪ್ರೂಫ್ ಮೇಕಪ್ ಜೊತೆಗಿರಲಿ, ಫೋಟೊಗಳು ಚೆನ್ನಾಗಿ ಬರಬೇಕಲ್ವಾ?
ಮಳೆ ಎಂದು ಮನೆಯಲ್ಲೇ ಕೂರಬೇಡಿ, ಮಳೆಯಲ್ಲಿ ಟ್ರಿಪ್ ಮಾಡಿದ ಅನುಭವ ನಿಮ್ಮ ಜೀವನವಿಡೀ ಜೊತೆಗಿರುತ್ತದೆ. ಒಮ್ಮೆ ಮಳೆಯಲ್ಲಿ ನೆನೆದು ನೋಡಿ, ಅದರ ಖುಷಿಯೇ ಬೇರೆ. ಹ್ಯಾಪಿ ಮಾನ್ಸೂನ್!