ಹೊಸದಿಗಂತ ಡಿಜಿಟಲ್ ಡೆಸ್ಕ್:
ದೈಹಿಕ ಸಮಸ್ಯೆಗಳಿಗೆ ಕೊಡುವಷ್ಟು ಗಮನ ಮಾನಸಿಕ ಸಮಸ್ಯೆಗಳಿಗೆ ನೀಡೋದಿಲ್ಲ, ಇತ್ತೀಚಿನ ದಿನಗಳಲ್ಲಿ ಡಿಪ್ರೆಶನ್‌ನಿಂದ ಆತ್ಮಹತ್ಯೆ ಹಾದಿ ಹಿಡಿಯುವವರು ಹೆಚ್ಚಾಗಿದ್ದಾರೆ. ಹಣ, ಪಾಪ್ಯುಲಾರಿಟಿ, ಟ್ಯಾಲೆಂಟ್ ಎಲ್ಲವೂ ಇದ್ದರೂ ಸೆಲೆಬ್ರಿಟಿಗಳು ಕೂಡ ಡಿಪ್ರೆಶನ್‌ಗೆ ತುತ್ತಾಗುತ್ತಿದ್ದಾರೆ.
ಹಾಂಗ್‌ಕಾಂಗ್ ಮೂಲದ ಗಾಯಕಿ ಮತ್ತು ಸಾಹಿತಿ ಕೊಕೊ ಲೀ ಡಿಪ್ರೆಶನ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಗಾಯನದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಕೊಕೊ ಕೆಲವು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಕೊಕೊ ಮನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು, ಅವರು ಕೋಮಾಗೆ ಜಾರಿದ್ದರು, ಅವರಿಗೆ ಬದುಕುವ ಇಷ್ಟವಿರಲಿಲ್ಲ ಎನಿಸುತ್ತದೆ. ಚಿಕಿತ್ಸೆ ಫಲಕಾರಿಯಾಗದೇ ಕೊಕೊ ಮೃತಪಟ್ಟಿದ್ದಾರೆ ಎಂದು ಕೊಕೊ ಸಹೋದರಿಯರು ಮಾಹಿತಿ ನೀಡಿದ್ದಾರೆ.
ಪಾಪ್ ಗಾಯಕಿಯಾಗಿ ಮ್ಯೂಸಿಕ್ ಇಂಡಸ್ಟ್ರಿಗೆ ಕಾಲಿಟ್ಟ ಕೊಕೊ 30 ವರ್ಷ ಸಂಗೀತದಲ್ಲಿಯೇ ಮಿಂದೆದ್ದಿದ್ದರು. ಅವರ ಅನೇಕ ಆಲ್ಬಮ್‌ಗಳು ಈಗಲೂ ಚಿರಪರಿಚಿತ. ಲೀ ಅವರ ಖಿನ್ನತೆಗೆ ಕಾರಣವೇನು ತಿಳಿದುಬಂದಿಲ್ಲ.