ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಬಗ್ಗೆ ಹೆಚ್ಚು ಮಾತನಾಡ್ತಿದ್ದಾರೆ, ಸರ್ಕಾರ ಬದಲಾಗಿದೆ ಸ್ವಾಮಿ ವರ್ಗಾವಣೆಯಾಗೋದು ಮಾಮೂಲು ಆದರೆ ಅಲ್ಲಿ ದಂಧೆ ಆಗಿದೆ ಅನ್ನೋಕೆ, ಲಂಚ ಪಡೆದಿದ್ದಾರೆ ಅನ್ನೋಕೆ ಇವರ ಹತ್ರ ಸಾಕ್ಷಿ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಯಾವಾಗ್ಲೂ ಹಿಟ್ ಆಂಡ್ ರನ್ ಇದ್ದ ಹಾಗೇ, ಓಡಿಹೋಗ್ತಾರೆ, ಆರೋಪ ಮಾಡಿದಮೇಲೆ ಅದನ್ನು ಸಾಬೀತು ಮಾಡ್ಬೇಕು, ಸುಮ್ಮನೆ ಬಾಂಬ್ ಹಾಕಿದೆ ಅಂತ ಹೇಳ್ಕೊಂಡು ಓಡಾಡಬಾರದು ಎಂದಿದ್ದಾರೆ. ಆರೋಪ ಮಾಡಿದಮೇಲೆ ತಾತ್ವಿಕವಾಗಿ ಹೋರಾಡಿ, ದಾಖಲೆ ಬಿಡುಗಡೆ ಮಾಡಿ ಆಗ ನಾವು ಉತ್ತರಿಸ್ತೇವೆ ಎಂದಿದ್ದಾರೆ. ಸಾವಿರ ಪ್ರಶ್ನೆ ಬಂದರೂ ಎದುರಿಸೋಕೆ ಸಿದ್ಧ ಸದನದಲ್ಲಿ ಮಾತನಾಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.