ಶ್ರೀವಾರಿ ದೇವಸ್ಥಾನದಲ್ಲಿ ಅಪಶಕುನ: ಮಹಾದ್ವಾರದಲ್ಲಿ ಬಿದ್ದ ಕಾಣಿಕೆ ಹುಂಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರದಲ್ಲಿ ಸ್ವಾಮಿಯ ಹುಂಡಿ ಬಿದ್ದಿದೆ. ಶ್ರೀವಾರಿ ಹುಂಡಿಯನ್ನು ಲಾರಿಯಲ್ಲಿ ದೇವಸ್ಥಾನದಿಂದ ಪರಕಾಮಣಿ ಮಂಟಪಕ್ಕೆ ತರುತ್ತಿದ್ದಾಗ ಈ ಘಟನೆ ನಡೆದಿದೆ. ಇದರಿಂದ ಹುಂಡಿಯಿಂದ ಕಾಣಿಕೆಗಳು ಬಿದ್ದಿವೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಎಚ್ಚರಿಕೆಯಿಂದ ಲಾರಿಗೆ ತುಂಬಿದರು. ಸಿಬ್ಬಂದಿ ನಿರ್ಲಕ್ಷ್ಯದಿಂದ ಹುಂಡಿ ಬಿದ್ದಿದೆ ಎಂದು ಟಿಟಿಡಿ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರು ತಿಮ್ಮಪಪ್ನಿಗೆ ಕಾಣಿಕೆಗಳನ್ನು ಅರ್ಪಿಸಿ, ತಮ್ಮ ಹರಕೆ ತೀರಿಸುತ್ತಾರೆ. ಅವುಗಳನ್ನು ಭಕ್ತರು ಹಣ ಅಥವಾ ಚಿನ್ನದ ರೂಪದಲ್ಲಿ ಅರ್ಪಿಸುತ್ತಾರೆ. ಭಕ್ತರು ನೀಡಿದ ಕಾಣಿಕೆಯಿಂದ ಹುಂಡಿ ತುಂಬಿದ ನಂತರ ಲಾರಿಯಲ್ಲಿ ದೇವಸ್ಥಾನದ ಹೊರಗೆ ತರಲಾಗುತ್ತದೆ. ಸಿಬ್ಬಂದಿಯ ಜಾಗರೂಕತೆಯ ಕೊರತೆಯಿಂದ ಇಂದು ಹುಂಡಿ ಬಿದ್ದ ಘಟನೆ ಸಂಭವಿಸಿದೆ.

ಹುಂಡಿ ಮೂಲಕ ದೇವಸ್ಥಾನಕ್ಕೆ ಕೋಟಿಗಟ್ಟಲೆ ಆದಾಯ ಬರುತ್ತಿದೆ. ಭಕ್ತರು ಕಾಣಿಕೆಗಳನ್ನು ಅರ್ಪಿಸುವುದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಇಂತಹ ಹುಂಡಿ ಕೆಳಗೆ ಬಿದ್ದರಿಂದ ಭಕ್ತರು ಆತಂಕಗೊಂಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿಟಿಡಿ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ಹುಂಡಿ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!