ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಮಂಡಲ ಅಧಿವೇಶನದಲ್ಲಿ ಪೆನ್ಡ್ರೈವ್ ಸುದ್ದಿ ಸದ್ದು ಮಾಡಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಕಚೇರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪೆನ್ಡ್ರೈವ್ನಲ್ಲಿ ಸಾಕ್ಷಿ ಇದೆ ಎಂದು ಹೇಳಿದ್ದರು.
ಇದೀಗ ಸದನದಲ್ಲಿ ಪೆನ್ಡ್ರೈವ್ ವಿಷಯ ಹೊರಬಂದಿದ್ದು, ಸ್ಪೀಕರ್ ಅವಕಾಶ ಕೊಟ್ರೆ ಈಗಲೇ ಪೆನ್ಡ್ರೈವ್ ಪ್ಲೇ ಮಾಡಿಸ್ತಿನಿ ಎಂದು ಹೇಳಿದ್ದಾರೆ. ವರ್ಗಾವಣೆಗೆ ಶಾಸಕರು ಶಿಫಾರಸು ಜೊತೆಗೆ 30 ಲಕ್ಷ ರೂಪಾಯಿ ಬೇರೆ ಲಂಚ ಕೇಳ್ತಿದ್ದಾರೆ ಎಂದು ಎಚ್ಡಿಕೆ ಆರೋಪ ಮಾಡಿದ್ದಾರೆ.
ಖಾಲಿ ಪೆನ್ಡ್ರೈವ್ ತೋರಿಸ್ತಿಲ್ಲ, ಪ್ರೂಫ್ ಇದೆ, ಸ್ಪೀಕರ್ ಒಕೆ ಅಂದ್ರೆ ಈಗಲೇ ಪ್ಲೇ ಮಾಡಿಸ್ತೇನೆ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದ್ದಾರೆ.