ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಇಬ್ಬರು ಕೆಳಜಾತಿಯ ಯುವಕರಿಗೆ ಮಲವನ್ನು ತಿನ್ನುವಂತೆ ಒತ್ತಾಯ ಮಾಡಲಾಗಿದೆ.
ವರ್ಖಾಡಿ ಗ್ರಾಮದ ಆರು ಮುಸ್ಲಿಮರು ಯುವಕರ ಮೇಲೆ ದೌರ್ಜನ್ಯ ಎಸಗಿದ್ದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಸಾಲದ್ದಕ್ಕೆ ಮಲ ತಿನ್ನುವಂತೆ ಒತ್ತಾಯಿಸಿದ್ದಾರೆ. ಕೆಳಜಾತಿಯ ಯುವಕರು ಮಹಿಳೆಯರಿಗೆ ಕಿರುಕುಳ ನೀಡಿದ್ದರು ಎಂದು ಮುಸ್ಲಿಮರು ಆರೋಪಿಸಿದ್ದಾರೆ.
ಕೆಳಜಾತಿಯ ಯುವಕರಾದ ಅನುಜ್ ಜಾತವ್ ಹಾಗೂ ಸಂತೋಷ್ ಕೇತವ್ ಎನ್ನುವವರ ಮೇಲೆ ಅಜಮತ್ ಖಾನ್, ಆರಿಫ್ ಖಾನ್, ಶಾಹಿದ್ ಖಾನ್, ಇಸ್ಲಾಮ್ ಖಾನ್, ರಾಯಿಸಾ ಬಾನಿ ಹಾಗೂ ಸಾಯ್ನಾ ಬಾನೊ ಎನ್ನುವವರು ದೌರ್ಜನ್ಯ ಎಸಗಿದ್ದು, ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.