ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು, ಆದ್ರೆ ಅದು ಪ್ರೀತಿಯ ಭಾಷೆ: ಯು.ಟಿ ಖಾದರ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ವಿಧಾನ ಸಭೆ ಅಧಿವೇಶನದ ವೇಳೆ ಸ್ಪೀಕರ್ ಯು.ಟಿ ಖಾದರ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೃತಜ್ಞತೆ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಖಾದರ್ ಅವರ ಕನ್ನಡದ ಬಗ್ಗೆ ಸ್ವಾರಸ್ಯಕರ ಮಾತು ನಡೆಯಿತು. ಈ ವೇಳೆ ಸ್ಪೀಕರ್ ಕನ್ನಡದ ಬಗ್ಗೆ ಚರ್ಚೆಯ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಖಾದರ್, ಯತ್ನಾಳ್ ಪದೇ ಪದೇ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು. ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆಯಾಗಿದೆ. ಹೀಗಾಗಿ ನಾನು ಅದಕ್ಕೆ ಕೃತಜ್ಞತೆ ಹೇಳುತ್ತಿದ್ದೇನೆ ಎಂದರು.

ಈ ವೇಳೆ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ. ಮಂಗಳೂರು ಕನ್ನಡ ಸುಂದರ ಭಾಷೆ, ಮೈಸೂರು ಕನ್ನಡ ಬೇರೆ, ಹೈದರಾಬಾದ್ ಕನ್ನಡ ಮುಂಬೈ ಕನ್ನಡ ಬೇರೆ. ನಮಗೆ ನಿಮ್ಮ ಭಾಷೆ ಅರ್ಥ ಆಗಬೇಕು. ಅದಕ್ಕೆ ಆ್ಯಪ್ ಹಾಕಿಕೊಡಿ. ಆವಾಗ ನಮಗೆ ಅರ್ಥ ಆಗುತ್ತದೆ ಎಂದರು.

ಮೊಬೈಲ್ ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದೆ. ಲೋಕಸಭೆಯಲ್ಲಿ ಹಿಂದಿ ಟು ಕನ್ನಡ ಕನ್ನಡ ಟು ಹಿಂದಿ ಇದ್ದ ಹಾಗೆಯೇ ಸ್ಪೀಕರ್ ಟು ಕನ್ನಡ ಮಾಡಿ ಎಂದು ಯತ್ನಾಳ್ ಕಾಲೆಳೆದ್ರು. ಇದಕ್ಕೆ ಉತ್ತರಿಸಿದ ಸ್ಪೀಕರ್, ಸದನದಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ಡಿಜಿಟಲೈಶೇಷನ್‌ ಮಾಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!