ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಸರಗೋಡು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರೆಡ್ ಅಲರ್ಟ್ ಮುಂದುವರಿದಿದ್ದು, ಈ ಹಿನ್ನೆಲೆ ನಾಳೆ (ಜು.07 ಶುಕ್ರವಾರ) ವೃತ್ತಿಪರ ಕಾಲೇಜು ಸಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ .
ಆದ್ರೆ ಪೂರ್ವ ನಿಗದಿತ ಪರೀಕ್ಷೆಗಳಿಗೆ ಸಂದರ್ಶನಗಳಿಗೆ ಬದಲಾಯಿಸಲಾಗುವುದಿಲ್ಲ. ಹೆಚ್ಚಿನ ರಜೆಯ ಕಾರಣದಿಂದಾಗಿ ಅಧ್ಯಯನದ ಸಮಯವನ್ನು ಸರಿಹೊಂದಿಸಲು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಕ್ರಮವನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ.