ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆಯೊಂದನ್ನು ನೀಡಿದ್ದಾರೆ.
ಬಂಡವಾಳ ಹೂಡಿಕೆಗೆ ಮೀಸಲಿಡುವುದನ್ನು ಕಡಿಮೆ ಮಾಡಬೇಡಿ ಹಾಗೂ ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಐದು ಗ್ಯಾರೆಂಟಿಗಳನ್ನು ಜಾರಿ ಮಾಡ್ತಿದ್ದೀರಿ, ಇವುಗಳನ್ನು ಮಾಡುವಾಗ ಜನರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಬೇಡಿ, ಹಾಗೇ ಹೆಚ್ಚು ಸಾಲವನ್ನು ಮಾಡಬೇಡಿ. ಇದಕ್ಕೆ ವಿರೋಧವಾಗಿ ನಡೆದುಕೊಂಡು ಗ್ಯಾರೆಂಟಿಗಳನ್ನು ಜಾರಿ ಮಾಡಿದರೆ ಅವು ಜನಪರ ಗ್ಯಾರೆಂಟಿ ಎನಿಸಿಕೊಳ್ಳೋದಿಲ್ಲ. ಜನವಿರೋಧಿ ಗ್ಯಾರೆಂಟಿ ಎನಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.