ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಶಿಕ್ಷಕನಿಗೆ 10 ವರ್ಷ ಜೈಲು, 10 ಲಕ್ಷ ರೂ. ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಬರಾನ್‌ನ ಪೋಕ್ಸೊ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಹಿನ್ನೆಲೆ ಏನು?
ಏಳು ವರ್ಷದ ಹಿಂದೆ ಬರಾನ್‌ನ ಶಾಲೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷ ವಿಶ್ವೇಂದ್ರ ಮೀನಾ ಅತ್ಯಾಚಾರ ಎಸಗಿದ್ದರು. ವಿದ್ಯಾರ್ಥಿನಿ ತಂದೆ ದೂರು ನೀಡಿ ಕೇಸ್ ದಾಖಲಿಸಿದ್ದರು. ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಅದನ್ನು ಚಿತ್ರೀಕರಿಸಿದರೆ ವಿಡಿಯೋ ವೈರಲ್ ಮಾಡುವ ಭಯ ಇಡಿಸಿದ್ದರು. ಜೊತೆಗೆ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ತನ್ನ ತಂದೆಗೆ ತಿಳಿಸಿದ್ದಳು.

ಜಾಮೀನಿನ ಮೇಲೆ ವಿಶ್ವೇಂದ್ರ ಮೀನಾ ಏಳು ವರ್ಷಗಳು ಹೊರಗಿದ್ದರು, ಇದೀಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಶಿಕ್ಷಕನನ್ನು ಜೈಲಿಗೆ ಕಳುಹಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!