ಕೆಲವೊಮ್ಮೆ ಫೋನ್ ಹ್ಯಾಂಗ್ ಆದಾಗ ರೀಬೂಟ್ ಮಾಡುವುದು ಬೆಸ್ಟ್ ಸೊಲ್ಯುಷನ್. ಆದರೆ ಫೋನ್ ರೀಬೂಟ್ ಬದಲು ಫಾಸ್ಟ್‌ಬೂಟ್‌ಗೆ ಹೋದರೆ ಅದು ತಾನಾಗೆಯೇ ಆನ್ ಆಗುವುದಿಲ್ಲ.
ಗಂಟೆಯಾದರೂ ಫೋನ್ ಆನ್ ಆಗ್ತಿಲ್ಲ ಎಂದು ಚಿಂತೆ ಮಾಡಬೇಡಿ, ಈ ಸ್ಟೆಪ್ಸ್ ಫಾಲೋ ಮಾಡಿ..
- ನಿಮ್ಮ ಫೋನ್ ಮೇಲೆ ಫಾಸ್ಟ್‌ಬೂಟ್ ಆಪ್ಷನ್ ಅಷ್ಟೆ ಕಾಣಿಸುತ್ತಿದ್ದರೆ. ಫೋನ್‌ನ್ನು ಚಾರ್ಜ್‌ಗೆ ಹಾಕಿ, ಚಾರ್ಜ್‌ಗೆ ಹಾಕಿದ ಕೆಲವು ನಿಮಿಷಗಳಲ್ಲಿ ಫೋನ್ ಆನ್ ಆಗುತ್ತದೆ.
- ಈ ಸ್ಟೆಪ್ ಎಲ್ಲಾ ಫೋನ್‌ಗಳಲ್ಲಿಯೂ ಕೆಲಸ ಮಾಡೋದಿಲ್ಲ. ಚಾರ್ಜ್‌ಗೆ ಹಾಕಿದಾಗಲೂ ಆನ್ ಆಗದಿದ್ರೆ ವಾಲ್ಯೂಮ್ ಹೆಚ್ಚು ಮಾಡುವ ಬಟನ್ ಹಾಗೂ ಪವರ್ ಆನ್ ಬಟನ್‌ನ್ನು ಒಟ್ಟಿಗೇ ಒತ್ತಿ. 30 ಸೆಕೆಂಡ್‌ಗಳವರೆಗೂ ಒತ್ತಿಯೇ ಹಿಡಿದುಕೊಳ್ಳಿ. ಆಗ ಫಾಸ್ಟ್‌ಬೂಟ್ ಮರೆಯಾಗಿ ನಿಮ್ಮ ಫೋನ್ ಸಿಂಬಲ್ ಕಾಣಿಸುತ್ತದೆ. ಆಗ ಬಟನ್ ಕೈಬಿಡಿ. ಒಂದೆರಡು ನಿಮಿಷದ ನಂತರ ಫೋನ್ ತಾನಾಗಿಯೇ ಆನ್ ಆಗುತ್ತದೆ.