ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ಅಭಿಪ್ರಾಯವನ್ನು ತಿಳಿದುಕೊಳ್ಳಲು ನಮ್ಮ ಮೆಟ್ರೋ ತೃಪ್ತಿ ಸಮೀಕ್ಷೆಗೆ ಮುಂದಾಗಿದೆ.
ಪ್ರತಿನಿತ್ಯ ಸಾಕಷ್ಟು ಮಂದಿ ಮೆಟ್ರೋಗಳಲ್ಲಿ ಪ್ರಯಾಣ ಮಾಡ್ತಾರೆ, ಕೆಲವೊಂದು ವಿಷಯಗಳು ಮೆಟ್ರೋ ಪ್ರಯಾಣ ಮತ್ತಷ್ಟು ಮಾಡುವಂತೆ ಮಾಡಿದ್ರೆ, ಕೆಲವೊಂದು ವಿಚಾರ ಕಿರಿಕಿರಿ ಉಂಟು ಮಾಡಿರುತ್ತದೆ. ಈ ಬಗ್ಗೆ ತಿಳಿಯಲು ಮೆಟ್ರೋ ಗ್ರಾಹಕರ ತೃಪ್ತಿ ಸಮೀಕ್ಷೆ ಮಾಡುತ್ತಿದೆ.
ಮೆಟ್ರೋದಲ್ಲಿ ಓಡಾಡುವ ಜನರಿಗೆ ಓಡಾಟದ ತೃಪ್ತಿ ಸಿಕ್ಕಿದ್ಯಾ ಎಂದು ಮೆಟ್ರೋ ಶೀಘ್ರದಲ್ಲಿಯೇ ತಿಳಿದುಕೊಳ್ಳಲಿದೆ. ಮೆಟ್ರೋ ಅಧಿಕೃತ ವೆಬ್ಸೈಟ್ನಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದು, ನೀವು ಅದಕ್ಕೆ ಉತ್ತರ ನೀಡಬೇಕಿದೆ. ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಸರ್ವೇ ಲಿಂಕ್ ಕ್ಲಿಕ್ ಮಾಡಿ ಅಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಬಹುದಾಗಿದೆ. ಜೊತೆಗೆ ರೇಟಿಂಗ್ ಕೂಡ ನೀಡಬಹುದಾಗಿದೆ.