ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಬಸ್ ಬಾಲಕನ ಮೇಲೆ ಹರಿದು 8 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಎಂ.ಮಡೇಹಳ್ಳಿಯಲ್ಲಿ ನಡೆದಿದೆ.
ದಿವ್ಯಾಂಶು ಸಿಂಗ್ (8) ಮೃತ ಬಾಲಕ. ಬಿದರಗೆರೆಯ ಎಸ್.ಎಸ್.ವಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ದಿವ್ಯಾಂಶು ಶಾಲಾ ವಾಹನದಿಂದ ಇಳಿದು ರಸ್ತೆದಾಟುತ್ತಿದ್ದಾಗ ಅದೇ ಶಾಲೆಯ ವಾಹನದ ಚಕ್ರಕ್ಕೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ.
ಶಾಲಾ ವಾಹನಕ್ಕೆ ಸಿಬ್ಬಂದಿ ನೇಮಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದು, ಚಾಲಕನ ಬೇಜವಾಬ್ದಾರಿಯಿಂದಾಗಿ ಪುಟ್ಟ ಬಾಲಕನ ಜೀವ ಹೋಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.