ಹೊಸದಿಗಂತ ವರದಿ ಪುತ್ತೂರು:
ನಗರದ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಮನೆ ಎದುರಿನ ಬಾವಿ ಭೂಮಿಯೊಳಗೆ ಕುಸಿದು ಬೃಹತ್ ಹೊಂಡ ನಿರ್ಮಾಣವಾದ ಘಟನೆ ನಡೆದಿದೆ.
ಸುಶೀಲಾ ಎಂಬವರ ಮನೆ ಎದುರುಗಡೆ ಇದ್ದ ಬಾವಿ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಭುವಿ ಒಳಗಡೆ ಕುಸಿದು ಹೋಯಿತು. ಇದರಿಂದ ಭಯಭೀತರಾಗಿರುವ ಮನೆ ಮಂದಿ ಮನೆಯೂ ಎಲ್ಲಿ ಕುಸಿಯುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಶಿವಶಂಕರ್, ನಗರಸಭಾ ಆಯುಕ್ತ ಮಧು ಎಸ್. ಮನೋಹರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಕಾಂಪೌಂಡ್, ಮನೆ ಕುಸಿತ
ಕುರಿಯ ವಿಷ್ಣುನಗರ ವಿಶ್ವನಾಥ ಶೆಟ್ಟಿ ಎಂಬವರ ಮನೆಯ ಒಂದು ಬದಿಯ ಕಂಪೌಂಡ್ ಕುಸಿದು ಮನೆಗೂ ಹಾನಿ ಉಂಟಾಗಿದೆ ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಹಿಂದೂ ಮುಖಂಡ ಅರುಣ್ ಪುತ್ತಿಲ ಮತ್ತಿತರರು ಭೇಟಿ ನೀಡಿ ಅಧಿಕಾರಿಗಳ ಜೊತೆ ಪರಿಹಾರದ ಕುರಿತು ಮಾತುಕತೆ ನಡೆಸಿದರು.