ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದು, ಬೆಂಗಳೂರಿಗರಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ.
ನಮ್ಮ ಮೆಟ್ರೋ ಅಭಿವೃದ್ಧಿ, ನೂತನ ಮೆಟ್ರೋ, ಕಾಮಗಾರಿ ಎಲ್ಲದಕ್ಕೂ ಸೇರಿ 30 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್ನಲ್ಲಿ ಮೆಟ್ರೋಗಾಗಿ ಮೀಸಲಿಟ್ಟಿದ್ದಾರೆ. ಇನ್ನು ಕೃಷಿ ಉದ್ಯಮಕ್ಕೆ ಉತ್ತೇಜನ ನೀಡಲು ನವೋದ್ಯಮ ಯೋಜನೆಗೆ 10 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.