ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್‌ನಲ್ಲಿ ಏನಿದೆ? ಬರೀ ಕಾಗೆ ಹಾರಿಸೋ ಕೆಲಸ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ತೋರಿಸೋದೆ ಈ ಬಜೆಟ್ ಮುಖ್ಯ ಉದ್ದೇಶದಂತೆ ಕಾಣಿಸ್ತಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಏನೂ ಕೊಡ್ತಿಲ್ಲ, ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಇಷ್ಟೇ ಬಜೆಟ್ ಸಾರಾಂಶ, ಆರ್ಥಿಕ ಮುನ್ನೋಟಕ್ಕೆ ಇಲ್ಲಿ ಅರ್ಥವೇ ಇಲ್ಲ ಬರೀ ಕಾಗೆ ಹಾರಿಸೋ ಬಜೆಟ್ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಬೇರೆ ಕೈಬಿಡ್ತೀವಿ ಎಂದಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಮಾಡೋಕೆ ಹೊರಟಿದ್ದಾರೆ, ಯಾವ ಭಾಗಕ್ಕೂ, ಯಾವ ಕ್ಷೇತ್ರಕ್ಕೂ ಸಮನಾದ ನ್ಯಾಯ ಒದಗಿಸಿಲ್ಲ ಎಂದಿದ್ದಾರೆ.