ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ನಟ ರಿಷಬ್ ಶೆಟ್ಟಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಬೃಹತ್ ಕಾರ್ಯಕ್ರಮವನ್ನೇ ಆಯೋಜಿಸಲಾಗಿತ್ತು.
ಗೆಳೆಯ ಪ್ರಮೋದ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲೇ ರಿಷಬ್ ಭಾವುಕರಾಗಿದ್ದಾರೆ. ಸಣ್ಣ ಊರಿನಿಂದ ಬಂದ ನಾನು ಕಣ್ಣಿನಲ್ಲಿ ಸಾವಿರ ಕನಸ್ಸಿಟ್ಟುಕೊಂಡಿದ್ದೆ. ಕಾಂತಾರಗೆ ಜನರು ತೋರಿರುವ ಪ್ರೀತಿಯ ಋಣ ಸದಾ ನನ್ನ ಮೇಲಿದೆ, ಸಾಯುವವರೆಗೂ ಸಿನಿಮಾ ಮಾಡುತ್ತಲೇ ಇರುತ್ತೇನೆ. ನಿಮ್ಮ ಋಣ ತೀರಿಸುತ್ತೇನೆ ಎಂದಿದ್ದಾರೆ.
ರಿಷಬ್ ಶೆಟ್ಟಿ ಫೌಂಡೇಷನ್ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಮಾಡುವ ನಿರ್ಧಾರವನ್ನು ಪ್ರಗತಿ ಮಾಡಿದ್ದು, ರಿಷಬ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆಯಿಂದಲೇ ಈ ಉತ್ತಮ ಕಾರ್ಯಕ್ಕೆ ದಂಪತಿ ಕೈ ಹಾಕಿದ್ದಾರೆ, ಇದು ಕೂಡ ಪ್ರಗತಿ ಗಿಫ್ಟ್ ಆಗಿದ್ದು, ರಿಷಬ್ ಕಣ್ಣೀರಾಗಿದ್ದಾರೆ.