ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಲೋಕಲ್ ರೈಲಿನಲ್ಲಿ ಪ್ರತಿದಿನ ಹಲವಾರು ಕುತೂಹಲಕಾರಿ ಸುದ್ದಿಗಳು ವೈರಲ್ ಆಗುತ್ತಿವೆ. ಕೆಲವರು ತಮ್ಮ ಪ್ರಯಾಣದ ಒತ್ತಡವನ್ನು ಮರೆಯಲು ಹಾಡುಗಾರಿಕೆ ಮತ್ತು ನೃತ್ಯದಲ್ಲಿ ತೊಡಗುತ್ತಾರೆ. ಇತ್ತೀಚೆಗೆ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಲತಾ ಮಂಗೇಶ್ಕರ್ ಹಾಡಿದ ಸೂಪರ್ ಹಿಟ್ ಹಾಡು ‘ಕಾಂತ ಲಗಾ’ ಹಾಡಿಗೆ ನೃತ್ಯ ಮಾಡಿದ್ದು ವೈರಲ್ ಆಗಿತ್ತು.
ಇನ್ಸ್ಟಾಗ್ರಾಮ್ ಬಳಕೆದಾರರು ಶೇರ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ, ಲತಾ ಮಂಗೇಶ್ಕರ್ ಹಾಡಿರುವ ‘ಕಾಂತ ಲಗಾ’ ಹಿಂದಿ ಹಾಡಿಗೆ ವಯಸ್ಕರು ಮತ್ತು ಯುವಕರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಕದ್ದಿದೆ.
ಹೀಗೆ ಶಾಂತವಾಗಿ ಪ್ರಯಾಣಿಸಿದರೆ ಒತ್ತಡವೂ ದೂರವಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.