HEALTH| ಮಧುಮೇಹಿಗಳ ಆರೋಗ್ಯ ಸುಧಾರಣೆಗೆ ಈ ಹಣ್ಣು ಸೂಕ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧುಮೇಹಿಗಳಿಗೆ ಪೇರಳೆ ಹಣ್ಣು ಅತ್ಯುತ್ತಮ ಆಹಾರ. ಇದು ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟವನ್ನು ಸುಧಾರಿಸುತ್ತದೆ, ಹೀಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಾದ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪೇರಳೆ ಹಣ್ಣನ್ನು ಸಹ ಬಳಸಲಾಗುತ್ತದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.

ಆರೋಗ್ಯಕರ ಪೇರಳೆ ಹಣ್ಣಿನ/ಸೀಬೆ ಹಣ್ಣಿನ ಲಾಭಗಳು

ಪೇರಳೆ ಹಣ್ಣು ವಾತ ಪಿತ್ತ ಮತ್ತು ಕಫ ಸಮತೋಲನದಲ್ಲಿಡುತ್ತದೆ. ಹಣ್ಣಷ್ಟೇ ಅಲ್ಲ, ತಾಜಾ ಪೇರಳೆ ಎಲೆಗಳ ಪೇಸ್ಟ್ ಉರಿಯೂತ, ಜ್ವರ, ತಲೆನೋವು ಮತ್ತು ಕೀಲು ನೋವು ನಿವಾರಿಸುತ್ತದೆ.

ಕೆಲವು ಅಧ್ಯಯನಗಳ ಪ್ರಕಾರ ಪೇರಳೆಯಲ್ಲಿ  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬ ಅಂಶ ತಿಳಿದುಬಂದಿದೆ.  ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು ಮಧುಮೇಹದ ಅಪಾಯವನ್ನು ತಡೆಯುತ್ತದೆ. ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ, ಒಣಗಿಸಿ, ಫಿಲ್ಟರ್ ಮಾಡಿ ಮತ್ತು ಕುಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಹಳ್ಳಿ ಮದ್ದಾಗಿಯೂ ಇದನ್ನು ಬಹು ಹಿಂದಿನಿಂದ ಬಳಸಲಾಗುತ್ತಿತ್ತು.

ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.  ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಾದ ಪೋಷಕಾಂಶವಾಗಿದೆ. ಹಾಗಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಹಣ್ಣು ಸೇವಿಸುವುದು ಉತ್ತಮವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!