ಕೂದಲ ಬೆಳವಣಿಗೆಗು ಮಸಾಜ್‌ಗೂ ಅವಿನಾಭಾವ ಸಂಬಂಧ ಇದೆ, ತಲೆಯ ಬುಡಕ್ಕೆ ಎಣ್ಣೆ ಹಚ್ಚಿ ಅಥವಾ ಹಚ್ಚದೆಯೇ ದಿನವೂ ಮಸಾಜ್ ಮಾಡಬೇಕು. ಇದರಿಂದಾಗಿ ರಕ್ತ ಸಂಚಾರ ಹೆಚ್ಚಾಗಿ ಕೂದಲು ಉದುರುವಿಕೆ ಸಮಸ್ಯೆಗಳು ಕಡಿಮೆಯಾಗುತ್ತವೆ.
ಮಸಾಜ್ ಮಾಡೋದು ಹೇಗೆ?
ನಿಮ್ಮ ಕೈ ಬೆರಳುಗಳಿಂದ ಮೀಡಿಯಂ ಪ್ರೆಶರ್‌ನಲ್ಲಿ ಬುಡವನ್ನು ಸರ್ಕುಲರ್ ಮೋಷನ್‌ನಲ್ಲಿ ಮಸಾಜ್ ಮಾಡಿ. ಇದೇ ರೀತಿ ಇಡೀ ಬುರುಡೆಗೆ ಮಸಾಜ್ ಮಾಡಿ, ಕನಿಷ್ಠ ಆರು ನಿಮಿಷಗಳ ಮಸಾಜ್ ಮಾಡಲೇ ಬೇಕು. ಕೈಗಳಿಂದ ಮಾಡಲು ಆಗುತ್ತಿಲ್ಲ ಎಂದಾದರೆ ಮಾರುಕಟ್ಟೆಯಲ್ಲಿ ಹೇರ್ ಮಸಾಜರ್ ಸಿಗುತ್ತವೆ ಅವುಗಳನ್ನು ಬಳಸಿ ಮಸಾಜ್ ಮಾಡಿ.