ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದಿರುವ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ರಾಜ್ಯಗಳಲ್ಲಿ ಚಾಲನೆ ನೀಡಿದ್ದಾರೆ. ಈ ರೈಲುಗಳು ಪ್ರಸ್ತುತ ಬಿಳಿ ಮತ್ತು ನೀಲಿ ಬಣ್ಣದಿಂದ ಕೂಡಿವೆ. ಶೀಘ್ರದಲ್ಲೇ ಈ ರೈಲುಗಳ ಬಣ್ಣ ಬದಲಾಗಲಿದ್ದು, ಆ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ.
ಬೂದು ಮತ್ತು ಕಿತ್ತಳೆ ಬಣ್ಣಗಳು, ಬಿಳಿ ಮತ್ತು ನೀಲಿ ಬಣ್ಣಗಳ ಜಾಗಕ್ಕೆ ಬರಲಿವೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಕೆಲವು ಬಣ್ಣ ಸಂಯೋಜನೆಗಳನ್ನು ಪ್ರಯತ್ನಿಸಿದೆ. ಇವುಗಳಿಗೆ ಕಿತ್ತಳೆ ಮತ್ತು ಬೂದು ಬಣ್ಣದ ಸಂಯೋಜನೆಗಳು ಸೂಕ್ತವಾಗಿವೆ ಎಂದು ತಿಳಿದುಬಂದಿದೆ.
ರೈಲ್ವೇ ಸಚಿವ ಅಶ್ವನಿ ವೈಷ್ಣವ್ ವಂದೇ ಅವರು ಭಾರತ್ ರೈಲುಗಳನ್ನು ತಯಾರಿಸುವ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಗೆ ಭೇಟಿ ನೀಡಲಿದ್ದಾರೆ. ನಂತರ, ಹೊಸ ಬಣ್ಣಗಳನ್ನು ನೋಡುವ ಮತ್ತು ಅನುಮೋದನೆಯ ಮುದ್ರೆ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈಗಿನ ಬಿಳಿ ಬಣ್ಣವನ್ನು ಸ್ವಚ್ಛಗೊಳಿಸಲು ಸ್ವಲ್ಪ ಕಷ್ಟವಾಗಿರುವುದರಿಂದ ಬಣ್ಣ ಬದಲಾಯಿಸಲು ನಿರ್ಧರಿಸಲಾಗಿದೆ. ಕೋಚ್ಗಳ ಎರಡೂ ಬದಿಯಲ್ಲಿ ಕಿತ್ತಳೆ ಬಣ್ಣ, ಬಾಗಿಲುಗಳಿಗೆ ಬೂದು ಬಣ್ಣ ಬರಲಿದೆ ಎಂಬ ಸುದ್ದಿಯಿದೆ. ರೈಲ್ವೆ ಸಚಿವಾಲಯದ ಅನುಮೋದನೆಯ ನಂತರ, ಈ ರೈಲುಗಳ ಬಣ್ಣಗಳನ್ನು ಬದಲಾಯಿಸುವ ಯೋಜನೆ ಇದೆ.