ಹೊಸದಿಗಂತ ವರದಿ ವಿಜಯಪುರ:
ಮುಖ್ಯಮಂತ್ರಿ ಸ್ಥಾನ ಮಾರಾಟಕ್ಕೆ ಇಟ್ಟ ಹಾಗೆ ಬಿಜೆಪಿ ಪ್ರತಿಪಕ್ಷದ ನಾಯಕನ ಸ್ಥಾನ ಮಾರಾಟಕ್ಕೆ ಇಟ್ಟಿದ್ದಾರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ? ಯಾರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೊಟ್ಟೆ ಉರಿಯಿಂದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡಬಾರದು. ಜೋಶಿ ಕೇಂದ್ರ ಸಚಿವರು, ಬಹಳ ತಿಳಿದುಕೊಂಡವರು ಹೀಗೆ ಮಾತನಾಡಬಾರದು. ಜೋಶಿಯವರಿಗೆ ಬಡವರ ಬಗ್ಗೆ ಗೊತ್ತಿಲ್ಲ ಎಂದರು.
ಇನ್ನು ಭಾಗ್ಯಗಳನ್ನು ನಾವು ಶ್ರೀಮಂತರಿಗೆ ಕೊಡುತ್ತಿಲ್ಲ. ಅನ್ನಭಾಗ್ಯ, ಬಸ್ ಪಾಸ್, 200 ಯುನಿಟ್ ವಿದ್ಯುತ್, ಯುವನಿಧಿ ಇದೆಲ್ಲ ಏನು ಶ್ರೀಮಂತರಿಗೆ ಕೊಟ್ಟಿದ್ದಾ? ಎಂದು ಪ್ರಶ್ನಿಸಿದರು.