CINE| ಸ್ವಿಸ್ ಚಿತ್ರೋತ್ಸವದಲ್ಲಿ ಬಾಹುಬಲಿ ಕ್ರೇಜ್: ವೈರಲ್ ಆಗ್ತಿದೆ ಬಾಲಿವುಡ್ ನಿರ್ದೇಶಕನ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ನಿರ್ದೇಶನದ ಬಾಹುಬಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಈ ಸಿನಿಮಾದ ಪ್ರಭಾವದಿಂದ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾದವು. ಆ ಸಿನಿಮಾ ನೋಡಿದ ಪ್ರೇಕ್ಷಕನಿಗೂ ಇಂದಿಗೂ ಮರೆಯಲು ಸಾಧ್ಯವಾಗುತ್ತಿಲ್ಲ. ಭಾರತೀಯ ಪ್ರೇಕ್ಷಕರು ಮಾತ್ರವಲ್ಲದೆ ಅಂತರರಾಷ್ಟ್ರೀಯ ಪ್ರೇಕ್ಷಕರು ಇಂದಿಗೂ ಬಾಹುಬಲಿಯನ್ನು ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ, ನ್ಯೂಚಾಟೆಲ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್ (NIFFF) ಸ್ವಿಟ್ಜರ್ಲೆಂಡ್‌ನ ನ್ಯೂಚಾಟೆಲ್‌ನಲ್ಲಿ ನಡೆಯುತ್ತಿದೆ.

ಈ ಉತ್ಸವದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಭಾಗವಹಿಸಿದ್ದರು. ಆ ಚಿತ್ರೋತ್ಸವದಲ್ಲಿ ಆಯ್ದ ಚಿತ್ರಗಳು ಪ್ರದರ್ಶನವಾಗುತ್ತಿದ್ದಾಗ ಪ್ರೇಕ್ಷಕರಲ್ಲಿ ಕೆಲವರು ‘ಬಾಹುಬಲಿ’ ಎಂದು ಕೂಗುತ್ತಿದ್ದರು. ಜಾಹೀರಾತು ಬಂದಾಗಲೆಲ್ಲಾ ಪ್ರೇಕ್ಷಕರು ಬಾಹುಬಲಿ..ಬಾಹುಬಲಿ ಎಂದು ಕೂಗಿದ್ದು, ಇದನ್ನು ಅನುರಾಗ್ ಕಶ್ಯಪ್ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ರಾಜಮೌಳಿ ಅವರನ್ನು ಟ್ಯಾಗ್ ಮಾಡಿದ್ದಾರೆ.

“ರಾಜಮೌಳಿ ಮತ್ತು ಅವರ ಚಿತ್ರಕ್ಕೆ ಇಲ್ಲಿ ಬಹಳ ಪ್ರೀತಿ ಸಿಕ್ಕಿದೆ. ರಾಜಮೌಳಿ ನೀವು ನಿಜವಾದ ರಾಕ್ ಸ್ಟಾರ್” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ರಾಜಮೌಳಿ ಪ್ರತಿಕ್ರಿಯಿಸಿದ್ದು, ಅನುರಾಗ್ ಕಶ್ಯಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!