ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ನೈಸ್ರಸ್ತೆಗಳಲ್ಲಿ ರಾತ್ರಿ ಸಮಯ ಟ್ರಾವೆಲ್ ಮಾಡುವಾಗ ಹುಷಾರಾಗಿರಿ, ಯಾಕೆ ಗೊತ್ತಾ? ನೈಸ್ರೋಡ್ನಲ್ಲಿ ದರೋಡೆ ಮಾಡುವ ಗ್ಯಾಂಗ್ ಒಂದು ಸಕ್ರಿಯವಾಗಿದೆ.
ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿ ಕೆರೆ ಬಳಿಯ ಬೇಗೂರು ಕೊಪ್ಪ ಕ್ರಾಸ್ ಸೇತುವೆ ಬಳಿ 40 ನಿಮಿಷ ಅಂತರದಲ್ಲಿ ಇಬ್ಬರು ಸವಾರರನ್ನು ದರೋಡೆ ಮಾಡಲಾಗಿದೆ.
ಇಳವರಸನ್ ಎನ್ನುವವರು ಕೆಲಸ ಮುಗಿಸಿ ಬೈಕ್ನಲ್ಲಿ ತೆರಳುವಾಗ ವ್ಯಕ್ತಿಯೊಬ್ಬ ಲಿಫ್ಟ್ ಕೇಳಿದ್ದಾನೆ, ಲಿಫ್ಟ್ ಕೊಡಲು ಗಾಡಿ ನಿಲ್ಲಿಸಿದ ತಕ್ಷಣ ಮೊಬೈಲ್ ಕಿತ್ತುಕೊಂಡ ಹಣ ಕೊಡುವಂತೆ ಹೆದರಿಸಿದ್ದಾರೆ, ತಕ್ಷಣ ಇಳವರಸನ್ ಕೂಗಾಡಿದ್ದಾರೆ, ಕೂಗಾಟ ಕೇಳಿ ದರೋಡೆ ಗ್ಯಾಂಗ್ ಇನ್ನಿಬ್ಬರು ಇಳವರಸನ್ ಮೇಲೆ ಹಲ್ಲೆ ಮಾಡೋಕೆ ಬಂದಿದ್ದಾರೆ.
ಅವರನ್ನು ನೋಡಿ ಇಳವರಸನ್ ಗಾಡಿ ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ, ಇನ್ಯಾರದ್ದೋ ಬಳಿ ಲಿಫ್ಟ್ ಪಡೆದು ತುಮಕೂರು ರಸ್ತೆ ವರೆಗೆ ತಲುಪಿದ್ದಾರೆ. ನಂತರ 112ಗೆ ಕರೆ ಮಾಡಿ ಮಾಹಿತಿ ನೀಡಿ ಪೊಲೀಸರ ಜೊತೆ ಘಟನೆ ನಡೆದ ಸ್ಥಳಕ್ಕೆ ವಾಪಾಸಾಗಿದ್ದಾರೆ. ದರೋಡೆ ಗ್ಯಾಂಗ್ ಗಾಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ.
ಕೇವಲ ರಾಮ್ ಎನ್ನುವವರನ್ನು ಕೂಡ ಅದೇ ರಸ್ತೆಯಲ್ಲಿ ಅರ್ಧ ಗಂಟೆ ಅಂತರದಲ್ಲಿ ದರೋಡೆ ಮಾಡಲಾಗಿದೆ. ಒಬ್ಬ ಲಿಫ್ಟ್ ಕೇಳಿದ್ದಾನೆ. ಬೈಕ್ ನಿಲ್ಲಿಸಿದ ತಕ್ಷಣ ಇನ್ನೂ ಮೂವರು ಬಂದು ನಿಂತಿದ್ದಾರೆ. ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಇವರು ಯಾವುದೇ ರೀತಿ ದಾಳಿ ಮಾಡಿಲ್ಲ, ಫೋನ್ ದುಡ್ಡು ಕಸಿದುಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ಶೋಧ ನಡೆಸುತ್ತಿದ್ದಾರೆ.